ಗಂಟಲಿನಲ್ಲಿ ಅವಲಕ್ಕಿ ಸಿಕ್ಕಿಹಾಕಿಕೊಂಡು ಮಗು ಸಾವು

ಚಿಕ್ಕಮಗಳೂರು: ಗಂಟಲಿನಲ್ಲಿ ಅವಲಕ್ಕಿ ಸಿಕ್ಕಿಹಾಕಿಕೊಂಡ ಪರಿಣಾಮ ಉಸಿರುಗಟ್ಟಿ ಮೂರು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮೂಗ್ತಿಹಳ್ಳಿ ತಾಲ್ಲೂಕಿನಲ್ಲಿ ನಡೆದಿದೆ.

ಸೋಮವಾರ ಅವಲಕ್ಕಿ ತಿನ್ನುವ ಸಂದರ್ಭದಲ್ಲಿ ಗಂಟಲಿನಲ್ಲಿ ಅವಲಕ್ಕಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದ ಮಗುವನ್ನು ಗಮನಸಿದ ಪೋಷಕರು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿನ ವೈದ್ಯರ ಸಲಹೆಯಂತೆ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಅನೀಶ್ ಮೃಪಟ್ಟಿದ್ದಾನೆ. ಮೂಗ್ತಿಹಳ್ಳಿ ತಾಲ್ಲೂಕಿನ ದುರ್ಗಾ ಪ್ರಸಾದ್ ದಂಪತಿಗಳ ಮಗ ಅನೀಶ್(3) ಮೃತ ದುರ್ದೈವಿ.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ರಾಜೀನಾಮೆ ಕೇಳಿದ ಸುಬ್ರಮಣ್ಯ ಸ್ವಾಮಿ

Get Latest updates on WhatsApp. Send ‘Subscribe’ to 8550851559