ಜುಬೇರ್ ಹತ್ಯೆ, ನಾಲ್ವರು ಶಂಕಿತರ ಬಂಧನ – News Mirchi

ಜುಬೇರ್ ಹತ್ಯೆ, ನಾಲ್ವರು ಶಂಕಿತರ ಬಂಧನ

ಮಂಗಳೂರು: ಉಲ್ಲಾಳ ನಿವಾಸಿ ಹಾಗೂ ಬಿಜೆಪಿ ಕಾರ್ಯಕರ್ತ ಜುಬೇರ್ ಬರ್ಬರ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಶಂಕಿತರನ್ನು ಬಂಧಿಸಿದ್ದಾರೆ. ಆದರೆ ಈ ಕುರಿತು ಪೊಲೀಸರಿಂದ ಇನ್ನೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

ಜುಬೇರ್ ಹತ್ಯೆ ನಂತರ ಹಂತಕರನ್ನು ಕೂಡಲೇ ಬಂಧಿಸುವಂತೆ ಉಲ್ಲಾಳ ಪೊಲೀಸ್ ಠಾಣೆ ಎದುರು ಸ್ಥಳೀಯರಿಂದ ಪ್ರತಿಭಟನೆ ವ್ಯಕ್ತವಾಗಿತ್ತು. ಅಲ್ತಾಫ್ ಮತ್ತು ಸುಹೇಲ್ ಇಬ್ಬರೂ ರೌಡಿ ಶೀಟರ್ ಗಳು ಈ ಪ್ರಕರಣದಲ್ಲಿ ಶಂಕಿತ ಆರೋಪಿಗಳಾಗಿದ್ದಾರೆ. ಹಂತಕರ ಪತ್ತೆಗೆ ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಆರೋಪಿಗಳು ಬೆಂಗಳೂರು ಬಿಟ್ಟ ಪರಾರಿಯಾಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನ ಕೊಲೆಯಾದ ಜುಬೇರ್ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಲು ಮುಂದಾಗಿದ್ದ ಸಚಿವ ಯು.ಟಿ.ಖಾದರ್ ಅವರು ಸ್ಥಳೀಯರ ವಿರೋಧ ಎದುರಿಸಬೇಕಾಯಿತು. ಸ್ಥಳೀಯರು ಮತ್ತು ಯು.ಟಿ.ಖಾದರ್ ಅವರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಬಿಗಡಾಯಿಸುವ ಹಂತಕ್ಕೆ ಹೋದಾಗಿ, ಸಚಿವರು ಪೊಲೀಸ್ ಭದ್ರತೆಯಲ್ಲಿ ಅಲ್ಲಿಂದ ವಾಪಸಾದರು.

Get Latest updates on WhatsApp. Send ‘Add Me’ to 8550851559

Loading...