ಮತ್ತೆ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಬಂಧನ

ಬೆಂಗಳೂರು: 15 ಜನ ಮಹಿಳೆಯರು ನೀಡಿದ ದೂರಿನ ಹಿನ್ನೆಲೆಯಲ್ಲಿ ಸಂಖ್ಯಾ ಶಾಸ್ತ್ರಜ್ಞ ಆರ್ಯವರ್ಧನ್ ರವರನ್ನು ಮತ್ತೆ ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ತಮಿಳುನಾಡಿನಲ್ಲಿ ಆರ್ಯವರ್ಧನ್ ರವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ನಂತರ ಭಾನುವಾರ 15 ಮಹಿಳೆಯರು ನೀಡಿದ ದೂರಿನ ಹಿನ್ನೆಲೆಯಲ್ಲಿ ಮತ್ತೆ ಆರ್ಯವರ್ಧನ್ ಮತ್ತು ಸಹಚರನನ್ನು ಬಂಧಿಸಲಾಗಿದೆ.

ಸಂಖ್ಯಾಶಾಸ್ತ್ರ ತರಬೇತಿ ನೀಡುವುದಾಗಿ ನಂಬಿಸಿ ಪ್ರತಿ ಮಹಿಳೆಯಿಂದ ರೂ. 24 ಸಾವಿರ ಪಡೆದು, ಯಾವುದೇ ತರಬೇತಿ ತರಗತಿ ನಡೆಸದೆ ವಂಚಿಸಿದ್ದಾರೆ ಎಂಬುದು ವಂಚನೆಗೊಳಗಾದ ಮಹಿಳೆಯರ ಆರೋಪ.

Loading...

Leave a Reply

Your email address will not be published.

error: Content is protected !!