ಪೊಲೀಸರೇ ದರೋಡೆಗಿಳಿದರೇ? |News Mirchi

ಪೊಲೀಸರೇ ದರೋಡೆಗಿಳಿದರೇ?

ಬೆಂಗಳೂರು: ಕಳ್ಳರನ್ನು ಹಿಡಿಯಬೇಕಿದ್ದ ಪೊಲೀಸರೇ ಮಹಿಳೆಯೊಬ್ಬರಿಂದ ಲಕ್ಷಾಂತರ ರೂ. ದೋಚಿದ ಘಟನೆ ನಡೆದಿದೆ. ವೃತ್ತಿಯಲ್ಲಿ ವಕೀಲರಾದ ಸುಕನ್ಯಾ ಎಂಬ ಮಹಿಳೆ ಮೆಜೆಸ್ಟಿಕ್ ನಿಂದ ಆಟೋದಲ್ಲಿ ಮನೆಗೆ ಹೋಗುತ್ತಿದ್ದಾಗ ಪ್ರತ್ಯಕ್ಷರಾದ ಗಿರಿನಗರ ಪೊಲೀಸ್ ಠಾಣೆಯ ಇಬ್ಬರು ಪೊಲೋಸರು, ದಾಖಲೆ ಇಲ್ಲದೆ ಹಣ ಸಾಗಿಸುತ್ತಿರುವ ಆರೋಪ ಹೊರಿಸಿ ಠಾಣೆಗೆ ಕರೆದೊಯ್ದಿದ್ದಾರೆ.

ಠಾಣೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಒಬ್ಬ ಪೊಲೀಸ್ ಪೇದೆ ಮಹಿಳೆಯ ಬಳಿ ಇದ್ದ ರೂ. 8 ಲಕ್ಷದೊಂದಿಗೆ ಪರಾರಿಯಾದರೆ, ಮತ್ತೊಬ್ಬ ಪೊಲೀಸ್ ಆಕೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ನಂತರ ಆಕೆಯನ್ನು ಆಕೆಯ ಮನೆಯ ಬಳಿ ಬಿಟ್ಟಿದ್ದಾರೆ.

ಘಟನೆಯ ಬಗ್ಗೆ ಹಿರಿಯ ಪೊಲೀಸರಿಗೆ ಮಹಿಳೆ ದೂರು ನೀಡಿದ್ದು, ತನ್ನ ಬಳಿ 8 ಲಕ್ಷ ರೂ. ನಗದು ಮತ್ತು ಪಾಸ್ ಬುಕ್ ಇತ್ತು. ಎರಡನ್ನೂ ಪೊಲೀಸರು ದೋಚಿದ್ದಾರೆ ಎಂದು ದೂರಿದ್ದಾರೆ. ರಜೆಯ ಮೇಲಿದ್ದ ಪೊಲೀಸರು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಮಹಿಳೆಗೆ ಭರವಸೆ ನೀಡಿದ್ದಾರೆ.

Loading...
loading...
error: Content is protected !!