ಜನಾರ್ಧನ ರೆಡ್ಡಿ ಬಂಧನಕ್ಕೆ ವೇದಿಕೆ ಸಿದ್ಧ?

ಇತ್ತೀಚೆಗೆ ಕಪ್ಪು ಹಣ ಬದಲಾವಣೆ ಆರೋಪ ಮಾಡಿ ಅತ್ಮಹತ್ಯೆ ಮಾಡಿಕೊಂಡಿದ್ದ ಕೆಎಎಸ್ ಅಧಿಕಾರಿಯ ಕಾರು ಚಾಲಕನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಎಎಸ್ ಅಧಿಕಾರಿ ಭೀಮಾನಾಯಕ್ ಅವರನ್ನು ಪೊಲೀಸರು ಬಂಧಿಸಿದ್ದು, ಗಣಿ ಧಣಿ ಜನಾರ್ದನರೆಡ್ಡಿ ಬಂಧನಕ್ಕೂ ವೇದಿಕೆ ಸಿದ್ಧವಾಗಿದೆ ಎನ್ನಲಾಗುತ್ತಿದೆ.

100 ಕೋಟಿಯಷ್ಟು ಕಪ್ಪು ಹಣವನ್ನು ಬಿಳಿಯಾಗಿಸಲು ಕೆಎಎಸ್ ಅಧಿಕಾರಿ ಭೀಮಾನಾಕ್ ಜನಾರ್ಧನರೆಡ್ಡಿ ಮತ್ತು ಶ್ರೀರಾಮುಲು ರವರಿಗೆ ಸಹಕರಿಸಿದ್ದರೆಂದು ತಮ್ಮ ಡೆತ್ ನೋಟ್ ನಲ್ಲಿ ಆರೋಪ ಮಾಡಿದ್ದರು.

ಈ ವಿಷಯ ತಿಳಿದಿದ್ದ ತನಗೆ ಅಧಿಕಾರಿ ಕಿರುಕುಳ ನೀಡುತ್ತಿದ್ದರು ಎಂದು ಭೀಮಾನಾಯಕ್ ಕಾರು ಚಾಲಕ ರಮೇಶ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.