ಶಾಸಕರ ರಹಸ್ಯ ಕ್ಯಾಂಪುಗಳ ಮೇಲೆ ದಾಳಿಗೆ ಮುಂದಾದ ಪೊಲೀಸರು

ಶಶಿಕಲಾ ಆರಂಭಿಸಿರುವ ಕ್ಯಾಂಪ್ ರಾಜಕೀಯಗಳಿಂದ ಶಾಸಕರನ್ನು ಹೊರಗೆ ಕರೆತರಲು ಸ್ವತಃ ತಮಿಳುನಾಡು ಡಿಜಿಪಿ ಟಿಕೆ ರಾಮಚಂದ್ರನ್ ಕಣಕ್ಕಿಳಿದಿದ್ದಾರೆ. ವಿಶೇಷ ಪೊಲೀಸ್ ತಂಡಗಳೊಂದಿಗೆ ಶಾಸಕರನ್ನು ಇಟ್ಟಿರುವ ರಹಸ್ಯ ಕ್ಯಾಂಪುಗಳ ಮೇಲೆ ದಾಳಿಗೆ ಹೊರಟಿದ್ದಾರೆ. ಚೆನ್ನೈಗೆ 70 ಕಿ.ಮೀ ದೂರದ ಕಾಂಚೀಪುರಂ ಜಿಲ್ಲೆಯ ಮಹಾಬಲಿಪುರಂ ಸಮೀಪವಿರುವ ಸಮುದ್ರ ದ್ವೀಪದಲ್ಲಿ ಶಾಸಕರನ್ನು ಶಶಿಕಲಾ ಗ್ಯಾಂಗ್ ಬಚ್ಚಿಟ್ಟಿದೆ ಎನ್ನಲಾಗಿದೆ. ಇಲ್ಲಿ ನಾಲ್ಕು ರೆಸಾರ್ಟ್ ಗಳಲ್ಲಿ ಪ್ರತಿ ರೆಸಾರ್ಟ್ ನಲ್ಲಿ 30 ಶಾಸಕರ ತಂಡಗಳನ್ನು ಬಚ್ಚಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಆದರೆ ಪೊಲೀಸರು ಅಲ್ಲಿನ ರಹಸ್ಯ ಶಾಸಕರ ಶಿಬಿರಗಳ ಮೇಲೆ ದಾಳಿಗೆ ಹೊರಡಲು ಶುರುವಾಗುತ್ತಿರುವುದು ಕಿವಿಗೆ ಬಿದ್ದ ಕೂಡಲೇ ಅಲ್ಲಿಂದ ಶಾಸಕರನ್ನು ಮತ್ತೊಂದು ರಹಸ್ಯ ಪ್ರದೇಶಕ್ಕೆ ಶಿಫ್ಟ್ ಮಾಡಲು ಶಶಿಕಲಾ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ದ್ವೀಪದಿಂದ ದೋಣಿಗಳ ಮೂಲಕ ಶಾಸಕರೆಲ್ಲರನ್ನೂ ಸಮುದ್ರ ತೀರಕ್ಕೆ ಕರೆತಂದು, ಅಲ್ಲಿಂದ ಬೇರೆ ಬೇರೆ ತಂಡಗಳಲ್ಲಿ ಅವರನ್ನು ರಹಸ್ಯ ಪ್ರದೇಶಗಳಿಗೆ ಕಳುಹಿಸಲು ಶಶಿಕಲಾ ಗ್ಯಾಂಗ್ ಪ್ರಯತ್ನಿಸುತ್ತಿದೆ.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache