ತನಿಖೆ ನಡೆಸುತ್ತಿದ್ದ ಅಧಿಕಾರಿಯಿಂದಲೇ 8 ವರ್ಷದ ಬಾಲಕಿಯ ಅತ್ಯಾಚಾರ, ಹತ್ಯೆ

ನಾಪತ್ತೆಯಾಗಿದ್ದ ಬಾಲಕಿಯನ್ನು ಪತ್ತೆ ಹಚ್ಚಬೇಕಾದ ಅಧಿಕಾರಿಯೇ ಆಕೆಯ ಪಾಲಿಗೆ ವಿಲನ್ ಆದ ಘಟನೆಯಿದು. ಬಾಲಕಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಯೊಬ್ಬರು ತನಿಖೆ ನಡೆಸುತ್ತಿದ್ದರು. ಬಾಲಕಿಯನ್ನು ಸುರಕ್ಷಿತವಾಗಿ ಪಾಲಕರಿಗೆ ಒಪ್ಪಿಸಬೇಕಾದ ಆ ಅಧಿಕಾರಿ ಆ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅತ್ಯಾಚಾರ ಮಾಡಿದ್ದಲ್ಲದೆ ಆಕೆಯನ್ನು ಹತ್ಯೆ ಮಾಡಿ ಮುಗಿಸಿದ್ದಾನೆ.

ಪ್ರಕರಣದ ತನಿಖೆ ನಡೆಸುತ್ತಿರುವ ಕ್ರೈಂ ಬ್ರಾಂಚ್ ಈ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದೆ. ಜಮ್ಮುವಿನಿಂದ ಸುಮಾರು 80 ಕಿ.ಮೀ ದೂರದಲ್ಲಿ ಕತುವಾ ಜಿಲ್ಲೆಯ ರಸಾನಾ ಗ್ರಾಮವಿದೆ. ಆ ಗ್ರಾಮದಲ್ಲಿ 8 ವರ್ಷದ ಬಾಲಕಿಯೊಬ್ಬಳು ಕಳೆದ ತಿಂಗಳು 10 ರಿಂದ ನಾಪತ್ತೆಯಾಗಿದ್ದಳು.

ಹೀಗೇ ಆದರೆ, ಭಾರತಕ್ಕೆ ಪಾಕ್ ವಿರುದ್ಧ ಯುದ್ಧವೊಂದೇ ಆಯ್ಕೆ

ದೂರು ನೀಡಿದ್ದರೂ ಪ್ರಯೋಜನವಿರಲಿಲ್ಲ

ಪೋಷಕರು ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಪ್ರಕರಣದ ತನಿಖೆಯ ಹೊಣೆಯನ್ನು ಹೀರಾನಗರ್ ಎಸ್ಪಿ ದೀಪಕ್ ಖಜಾರಿಯಾ ಎಂಬುವವರು ವಹಿಸಿಕೊಂಡಿದ್ದರು. ಆದರೆ ಈತ ಪ್ರಕರಣದ ಕುರಿತು ಅಸಡ್ಡೆ ಪ್ರದರ್ಶಿಸುತ್ತಿದ್ದು, ಪ್ರಶ್ನಿಸಿದ ಬಾಲಕಿಯ ಕುಟುಂಬ ಮತ್ತು ಗ್ರಾಮಸ್ಥರಿಗೆ ಬೆದರಿಕೆ ಹಾಕುತ್ತಿದ್ದ.

ಒಂದು ವಾರದ ನಂತರ ಪತ್ತೆಯಾಯಿತು ಬಾಲಕಿಯ ಶವ

ಖಜಾರಿಯಾಗೆ ಪ್ರಕರಣವನ್ನು ಒಪ್ಪಿಸಿದರೂ ಯಾವುದೇ ಫಲಿತಾಂಶವಿಲ್ಲ. ಆದರೆ ಒಂದು ವಾರದ ನಂತರ ಗ್ರಾಮದ ಹೊರವಲಯದ ಹೊಲಗಳಲ್ಲಿ ಬಾಲಕಿಯ ಮೃತದೇಹ ದೊರೆತಿದೆ. 8 ವರ್ಷದ ಬಾಲಕಿಯ ಹತ್ಯೆಗೂ ಮುನ್ನ ಅತ್ಯಾಚಾರ ನಡೆದಿದೆ ಎಂಬ ವಿಷಯ ಅಲ್ಲಿನ ಜನರಲ್ಲಿ ಆಕ್ರೋಶ ತರಿಸಿತ್ತು. ಜನ ರಸ್ತೆಗಿಳಿದು ಪ್ರತಿಭಟನೆಗಿಳಿದರು.

ಮಮತಾ ನನಗೆ ಮಹಿಳಾ ಗಾಂಧಿಯಾಗಿ ಕಾಣುತ್ತಾರೆ: ಹಾರ್ಧಿಕ್

ಪ್ರಕರಣ ಕ್ರೈಂ ಬ್ರಾಂಚ್ ಗೆ ವರ್ಗಾವಣೆ

ಪ್ರತಿಭಟನೆಗಳಿಂದಾಗಿ ಪೊಲೀಸ್ ಇಲಾಖೆ ಪ್ರಕರಣವನ್ನು ದೀಪಕ್ ಖಜಾರಿಯಾ ಅವರಿಂದ ಕ್ರೈಂ ಬ್ರಾಂಚ್ ಗೆ ವರ್ಗಾಯಿಸಿತು. ನಂತರ ತನಿಖೆಯಲ್ಲಿ ತಿಳಿದು ಬಂದ ಸತ್ಯ ಆಘಾತಕಾರಿಯಾಗಿತ್ತು. ಈ ಹಿಂದೆ ತನಿಖೆಯ ಹೊಣೆಯನ್ನು ಹೊತ್ತುಕೊಂಡಿದ್ದ ದೀಪಕ್ ಖಜಾರಿಯಾ, ಬಾಲಕಿಯನ್ನು ಒಂದು ವಾರ ಕಾಲ ಬಂಧಿಸಿ ಅತ್ಯಾಚಾರ ನಡೆಸಿ ನಂತರ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಆರೋಪಿ ಅಧಿಕಾರಿಗೆ ಬಾಲಕನೂ ನೀಡಿದ್ದ ಸಾಥ್

28 ವರ್ಷದ ಪೊಲೀಸ್ ಅಧಿಕಾರಿ ದೀಪಕ್ ಖಜಾರಿಯಾ ಈ ಕೃತ್ಯವೆಸಗಿರುವುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದು, ತಾನೇ ಕೃತ್ಯವೆಸಗಿರುವುದಾಗಿ ಆರೋಪಿ ಅಂಗೀಕರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿ ಅಧಿಕಾರಿಗೆ ಮತ್ತೊಬ್ಬ ಬಾಲಕನೂ ಸಹಕಾರ ನೀಡಿದ್ದು, ಅವನನ್ನೂ ಬಂಧಿಸಲಾಗಿದೆ. ಪೂರ್ವಯೋಜಿತವಾಗಿ ಆ ಅಧಿಕಾರಿ ಬಾಲಕಿಯನ್ನು ಹತ್ಯೆ ಮಾಡಿದ್ದು, ಇದರ ಹಿಂದೆ ಬಲವಾದ ಕಾರಣವಿರಬೇಕು ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಈ ಆಪ್ ನಿಂದ ಸುಲಭವಾಗಿ ಹಣವನ್ನೂ ಗಳಿಸಬಹುದು… ಗೊತ್ತಾ?

Get Latest updates on WhatsApp. Send ‘Subscribe’ to 8550851559