ತೆರಿಗೆದಾರರ ಮೇಲೆ ನಿಯಂತ್ರಣ: ಮೂಡದ ಒಮ್ಮತ

ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಯಲ್ಲಿ ಯಾವ ತೆರಿಗೆದಾರರ ಮೆಲೆ ಯಾರಿಗೆ ನಿಯಂತ್ರಣವಿರಬೇಕು ಎಂಬ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಒಮ್ಮತ ಮೂಡಿಲ್ಲ. ಶುಕ್ರವಾರ ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಸದಸ್ಯರ ನಡುವೆ ಒಮ್ಮದ ಮೂಡಲಿಲ್ಲ. ತೆರಿಗೆ ದರಗಳಿಗೆ ಗುರುವಾರದ ಸಭೆಯಲ್ಲಿ ಕೌನ್ಸಿಲ್ ಒಮ್ಮತದಿಂದ ಅಂಗೀಕರಿಸಿದ್ದು, ತೆರಿಗೆದಾರರ ನಿಯಂತ್ರಣದ ವಿಷಯದಲ್ಲಿ ಮಾತ್ರ ಅಡ್ಡಿಯುಂಟಾಗಿದೆ. ಹೀಗಾಗಿ ಏಪ್ರಿಲ್ ನಿಂದ ಜಿಎಸ್ಟಿ ಜಾರಿ ಅಸಾಧ್ಯವಾಗಬಹುದು ಎಂಬ ಸಂದೇಹಗಳು ಸೃಷ್ಟಿಯಾಗಿವೆ.

ಯಾವ ವರ್ಗದ ತೆರಿಗೆದಾರರು ಕೇಂದ್ರದ ವ್ಯಾಪ್ತಿಯಲ್ಲಿರಬೇಕು? ಯಾವ ವರ್ಗದ ತೆರಿಗೆ ರಾಜ್ಯದ ವ್ಯಾಪ್ತಿಗೆ ಬರಬೇಕು ಎಂಬುದರ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಭಿನ್ನ ವಾದ ನಡೆಸಿವೆ.

ಈ ವಿಷಯದಲ್ಲಿ ಒಮ್ಮತ ಮೂಡದ ಕಾರಣ ನವೆಂಬರ್ 9, 10 ರಂದು ನಡೆಯಬೇಕಿರುವ ಕೌನ್ಸಿಲ್ ಸಭೆಯನ್ನು ರದ್ದುಪಡಿಸಲಾಗಿದೆ. ಅ ಸಭೆಯಲ್ಲಿ ಜಿಎಸ್ಟಿ ಜೊತೆಗೆ ಇತರ ಸಿಜಿಎಸ್ಟಿ, ಎಸ್ಜಿಎಸ್ಟಿ, ಐಜಿಎಸ್ಟಿ ಕಾನೂನುಗಳನ್ನು ಅಂತಿಮಗೊಳಿಸಬೇಕಿತ್ತು. ನವೆಂಬರ್ 20 ರಂದು ರಾಜ್ಯಗಳ ಹಣಕಾಸು ಸಚಿವರೊಂದಿಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸಭೆ ಸೇರಿ ಒಮ್ಮತ ಮೂಡಿಸಲು ಪ್ರಯತ್ನಿಸಲಿದ್ದಾರೆ.