ಜಯಾ ಇಲ್ಲದ ತಮಿಳುನಾಡು ರಾಜಕೀಯ ಹೇಗಿರುತ್ತೆ?

ಚೆನ್ನೈ: ಅಣ್ಣಾಡಿಎಂಕೆ ನಾಯಕಿ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನಿಧನದಿಂದ ತಮಿಳುನಾಡು ರಾಜಕೀಯದಲ್ಲಿ ಮಹತ್ತರ ಬದಲಾವಣೆಗಳಾಗುವ ಸಾಧ್ಯತೆಗಳಿವೆ. ಜಯಲಲಿತಾಳಷ್ಟು ಜನಪ್ರಿಯ, ಪ್ರಬಲ ನಾಯಕರು ಆ ಪಕ್ಷದಲ್ಲಿ ಮತ್ತೊಬ್ಬರಿಲ್ಲ. ಇಲ್ಲಿಯವರೆಗೂ ಆಕೆಯ ನಿರ್ದೇಶನದಂತೆ ನಡೆದ ಆಡಳಿತ ಪಕ್ಷದ ಭವಿಷ್ಯ ಏನು ಎಂಬುದು ಪ್ರಶ್ನಾರ್ಥಕವಾಗಿದೆ.

ಪಕ್ಷ ಮುನ್ನಡೆಸುವಲ್ಲಿ ಆಕೆಯ ಸಮಾನರಲ್ಲ, ಹತ್ತಿರಕ್ಕೂ ಸುಳಿಯಬಲ್ಲ ವ್ಯಕ್ತಿ ಮತ್ತೊಬ್ಬರಿಲ್ಲ. ಮತ್ತೊಂದು ಕಡೆ ವಿಧಾನಸಭೆಯಲ್ಲಿ ಕರುಣಾನಿಧಿಯವರ ಡಿಎಂಕೆ ಪ್ರಬಲ ಪ್ರತಿಪಕ್ಷವಾಗಿದೆ. 234 ಸದಸ್ಯಬಲದ ವಿಧಾನಸಭೆಯಲ್ಲಿ ಅಣ್ಣಾಡಿಎಂಕೆ ಬಲ 134, ಪ್ರತಿಪಕ್ಷ ಡಿಎಂಕೆ – ಕಾಂಗ್ರೆಸ್ ಮೈತ್ರಿಕೂಟ ಬಲ 98. ಅಧಿಕಾರ ಪಡೆಯಬೇಕೆಂದರೆ ಬೇಕಾದ ಕನಿಷ್ಟ ಸಂಖ್ಯಾಬಲ 118. ಅಂದರೆ ಅಧಿಕಾರಕ್ಕೆ ಬರಲು ಡಿಎಂಕೆ ಕೇವಲ 20 ಸ್ಥಾನಗಳ ಕೊರತೆ ಎದುರಿಸುತ್ತಿದೆ. ಈ ವಿಷಯವೇ ತಮಿಳುನಾಡು ರಾಜಕೀಯದಲ್ಲಿ ಪ್ರಮುಖ ಬದಲಾವಣೆಗೆ ಕಾರಣವಾಗಲಿದೆ.

ಇದುವರೆಗೂ ಜಯಲಲಿತಾ ರವರಿಗೆ ಹೆದರಿಕೆಯಿಂದಲೋ, ಹಾಗೆ ನಟಿಸುತ್ತಲೋ ಇರುವವರಿಗೆ ಸ್ವಾತಂತ್ರ್ಯ ಸಿಕ್ಕ ಹಾಗಿದೆ. ಅಂತಹವರ ನಡೆ ಪಕ್ಷದಲ್ಲಿ ಮುಂದೆ ಹೇಗಿರುತ್ತದೆ ಎಂಬುದೇ ಕುತೂಹಲಕರಕಾರಿಯಾಗಿದೆ. ಕೆಲ ದಿನಗಳ ನಂತರವಾದರೂ ಪ್ರಮುಖ ಪ್ರತಿಪಕ್ಷ‌ ಡಿಎಂಕೆ ಆಡಳಿತ ಪಕ್ಷದಲ್ಲಿ ಒಡಕು ಮೂಡಿಸಲು ಪ್ರಯತ್ನಿಸುವುದಂತು ಸತ್ಯ. ಇಂತಹ ಪರಿಸ್ಥಿತಿಗಳ ನಡುವೆ ಕೇಂದ್ರದ ನಡೆಯೂ ಪ್ರಮುಖವಾಗುತ್ತದೆ.

Related News

Loading...

Leave a Reply

Your email address will not be published.

error: Content is protected !!