ಕಮ್ಯೂನಿಷ್ಟರು ಇರುವ ಕಡೆಯೇ ಹೆಚ್ಚು ರಾಜಕೀಯ ಹಿಂಸಾಚಾರಗಳು – News Mirchi

ಕಮ್ಯೂನಿಷ್ಟರು ಇರುವ ಕಡೆಯೇ ಹೆಚ್ಚು ರಾಜಕೀಯ ಹಿಂಸಾಚಾರಗಳು

ಕೇರಳದಲ್ಲಿ ನಡೆಯುತ್ತಿರುವ ರಾಜಕೀಯ ಹತ್ಯೆಗಳಿಗೆ ಸಿಪಿಐ(ಎಂ) ಪಕ್ಷವೇ ಕಾರಣ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆರೋಪಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ವಿಸ್ತರಿಸದಂತೆ ತಡೆಯಲು ಅದು ಜನರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದೆ ಎಂದು ಅವರು ಆರೋಪಿಸಿದರು.

ರಾಷ್ಟ್ರ ರಾಜಧಾನಿಯಲ್ಲಿ ಜನ್ ರಕ್ಷಾ ಯಾತ್ರೆಯಲ್ಲಿ ಮಾತನಾಡುತ್ತಿದ್ದ ಅವರು, ಕೇರಳದಲ್ಲಿ ನಡೆಯುತ್ತಿರುವ ರಾಜಕೀಯ ಹತ್ಯೆಗಳು ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಆದೇಶದಂತೆಯೇ ನಡೆಯುತ್ತಿವೆ ಎಂದು ಹೇಳಿದರು. ಬಹುತೇಕ ಬಿಜೆಪಿ ಮತ್ತು ಆರ್.ಎಸ್.ಎಸ್ ಕಾರ್ಯಕರ್ತರ ಕೊಲೆಗಳು ಪಿಣರಾಯಿ ವಿಜಯನ್ ಅವರ ತವರು ಜಿಲ್ಲೆಯಲ್ಲಿಯೇ ನಡೆದಿವೆ ಎಂದು ಶಾ ಆರೋಪಿಸಿದರು.

[ಇದನ್ನೂ ಓದಿ: ಸ್ವಗ್ರಾಮದ ತಮ್ಮ ಶಾಲೆಯಲ್ಲಿನ ಮಣ್ಣು ಸ್ಪರ್ಶಿಸಿ ಭಾವುಕರಾದ ಪ್ರಧಾನಿ]

ಹಲವು ವರ್ಷಗಳ ಕಾಲ ಕಮ್ಯೂನಿಷ್ಟ್ ಪಕ್ಷಗಳು ಆಡಳಿತ ನಡೆಸಿದ ತ್ರಿಪುರ, ಪಶ್ಚಿಮ ಬಂಗಾಳ ಮತ್ತು ಕೇರಳಗಳಲ್ಲಿ ಹೆಚ್ಚಾಗಿ ಇಂತಹ ರಾಜಕೀಯ ಹಿಂಸಾಚಾರಗಳು ನಡೆಯುತ್ತಿವೆ. ಅವರು ಅಧಿಕಾರದಲ್ಲಿರುವ ಕಡೆ ಇಂತಹ ಹತ್ಯಾ ಸಂಸ್ಕೃತಿ ತಲೆ ಎತ್ತುತ್ತಿದೆ ಎಂದು ಆರೋಪಿಸಿದರು.

[ಇದನ್ನೂ ಓದಿ: ಹನಿಪ್ರೀತ್ ತಲೆಮರೆಸಿಕೊಳ್ಳಲು ಬಳಸಿದ್ದು 18 ಸಿಮ್ ಕಾರ್ಡ್’ಗಳು]

ಕೇರಳದಲ್ಲಿ ಕಮ್ಯೂನಿಷ್ಟ್ ಪಾರ್ಟಿ ಅಧಿಕಾರಕ್ಕೆ ಬಂದಾಗಿನಿಂದ 120 ಕ್ಕೂ ಹೆಚ್ಚು ಬಿಜೆಪಿ ಮತ್ತು ಸಂಘಪರಿವಾರ ಕಾರ್ಯಕರ್ತರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಒಬ್ಬ ವ್ಯಕ್ತಿಯನ್ನು ಒಂದು ಬುಲೆಟ್ ನಿಂದ ಕೊಲ್ಲಲು ಸಾಧ್ಯವಾಗುವಾಗ, ಭಾರತೀಯ ಜನತಾ ಪಕ್ಷದ ಕಾರ್ಯಕರ್ತರನ್ನೇಕೆ ಬರ್ಬರವಾಗಿ ಹತ್ಯೆ ಮಾಡಿ ದೇಹಗಳನ್ನು ಛಿದ್ರಗೊಳಿಸುತ್ತಿದ್ದಾರೆ? ಬಿಜೆಪಿಯನ್ನು ಬೆಂಬಲಿಸುವವರಲ್ಲಿ ಭೀತಿ ಹುಟ್ಟಿಸಲೆಂದೇ ಹೀಗೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

Get Latest updates on WhatsApp. Send ‘Add Me’ to 8550851559

Loading...