ಐದು ರಾಜ್ಯಗಳ ಚುನಾವಣಾ ವೇಳಾಪಟ್ಟಿ ಪ್ರಕಟ |News Mirchi

ಐದು ರಾಜ್ಯಗಳ ಚುನಾವಣಾ ವೇಳಾಪಟ್ಟಿ ಪ್ರಕಟ

ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳ ವೇಳಾಪಟ್ಟಿ ಯನ್ನು ಬುಧವಾರ ಮಧ್ಯಾಹ್ನ ಚುನಾವಣಾ ಆಯೋಗದ ಮುಖ್ಯಸ್ಥ ನಸೀಮ್ ಜೈದಿ ಪ್ರಕಟಿಸಿದರು. ಉತ್ತರ ಪ್ರದೇಶ, ಗೋವಾ, ಪಂಜಾಬ್, ಉತ್ತರಖಂಡ್, ಮಣಿಪುರಗಳಲ್ಲಿ ಚುನಾವಣೆಗಳು ನಡೆಯಲಿವೆ. ಐದು ರಾಜ್ಯಗಳ ಒಟ್ಟು 690 ವಿಧಾನಸಭೆ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ಅವರು ಹೇಳಿದ್ದಾರೆ. ಒಟ್ಟು 16 ಕೋಟಿ ಜನ ತಮ್ಮ ಮತದಾನದ ಹಕ್ಕನ್ನು ಉಪಯೋಗಿಸಿಕೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಉತ್ತರ ಪ್ರದೇಶದ 403, ಮಣಿಪುರದಲ್ಲಿ 60, ಪಂಜಾಬ್ 117, ಉತ್ತರ ಖಂಡದಲ್ಲಿ 70 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಐದು ರಾಜ್ಯಗಳಲ್ಲಿ 1.85 ಲಕ್ಷ ಮತಗಟ್ಟೆಗಳನ್ನು ತೆರೆಯಲಿದ್ದಾರೆ. ಎಲ್ಲಾ ಮತಗಟ್ಟೆಗಳಲ್ಲಿ ಇವಿಎಂ ಗಳನ್ನು ಬಳಸುತ್ತಿದ್ದು, ಈ ಬಾರಿ ಅಭ್ಯರ್ಥಿಯ ಫೋಟೋ ಕೂಡಾ ಇವಿಯಂ ಯಂತ್ರಗಳ ಮೇಲಿರುತ್ತದೆ.

ಗೋವಾ ಹಾಗೂ ಪಂಜಾಬ್ ಗಳಲ್ಲಿ ಫೆಬ್ರವರಿ 4 ರಂದು ಮತದಾನ ನಡೆಯುತ್ತದೆ. ಉತ್ತರಖಂಡದಲ್ಲಿನ 70 ಸ್ಥಾನಗಳಿಗೆ ಫೆಬ್ರವರಿ 15 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ 60 ಸ್ಥಾನಗಳಿಗೆ ಎರಡು ಹಂತಗಳಲ್ಲಿ ಮಾರ್ಚ್ 4 ಮತ್ತು 8 ರಂದು ಮತದಾನ ನಡೆಯಲಿದೆ.

ಉತ್ತರ ಪ್ರದೇಶದಲ್ಲಿ 403 ಸ್ಥಾನಗಳಿಗೆ ಒಟ್ಟು ಏಳು ಹಂತಗಳಲ್ಲಿ ಕ್ರಮವಾಗಿ ಫೆ.11, 15, 19, 23, 27, ಮಾ.4, 8 ರಂದು ಮತದಾನ ನಡೆಲಿದೆ. ಎಲ್ಲಾ ರಾಜ್ಯಗಳ ಚುನಾವಣಾ ಫಲಿತಾಂಶ ಮಾರ್ಚ್ 11 ರಂದು ಹೊರಬೀಳಲಿದೆ.

The Election Commission (EC) on Wednesday announced the dates and phases of elections for five states Uttar Pradesh, Punjab, Uttarakhand, Manipur and Goa.

Loading...
loading...
error: Content is protected !!