ಉತ್ತರ ಪ್ರದೇಶ ಚುನಾವಣೆ ಗೆಲ್ಲೋರು ಯಾರು? ಸಮೀಕ್ಷೆ ಹೊರಬಿದ್ದಿದೆ ನೋಡಿ

ಎಲ್ಲಾ ರಾಜಕೀಯ ಪಕ್ಷಗಳಿಗೂ ಉತ್ತರ ಪ್ರದೇಶ ಚುನಾವಣೆ ಅತ್ಯಂತ ಮಹತ್ವದ ವಿಷಯ. ಚುನಾವಣೆಯ ವೇಳಾಪಟ್ಟಿಯನ್ನೂ ನಿನ್ನೆ ಚುನಾವಣಾ ಆಯೋಗ ಪ್ರಕಟಿಸಿದೆ. ನೋಟು ರದ್ದು ತೀರ್ಮಾನ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ವರವಾಗುತ್ತಾ ಅಥವಾ ಮುಳ್ಳಾಗುತ್ತಾ ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಇಂಡಿಯಾ ಟುಡೇ ಅಕ್ಟೋಬರ್ ನಿಂದ ಡೆಸೆಂಬರ್ ವರೆಗೂ ನಡೆಸಿದ ಸಮೀಕ್ಷೆಯಲ್ಲಿ ಜನರು ನೋಟು ರದ್ದು ಪ್ರಭಾವ ತಮ್ಮ ಮೇಲೆ ಆಗಿಲ್ಲ ಎಂದು ಹೇಳಿದ್ದಾರೆ. ನೋಟು ರದ್ದಾಗುವುದಕ್ಕೂ ಮುನ್ನ ಬಿಜೆಪಿಗೆ ಶೇ.31 ರಷ್ಟು ಜನ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದರೆ, ಡೆಸೆಂಬರ್ ನಲ್ಲಿ ಬೆಂಬಲಿಸಿದವರ ಪ್ರಮಾಣ ಶೇ.33 ಕ್ಕೆ ಏರಿದೆ. ಈ ಅಂಕಿ ಅಂಶಗಳ ಪ್ರಕಾರ ಕಮಲ ಪಕ್ಷ 403 ಸ್ಥಾನಗಳ ವಿಧಾನಸಭೆಯಲ್ಲಿ 206 – 216 ಸೀಟುಗಳು ಗೆಲ್ಲಬಹುದು. ಆಡಳಿತ ಸಮಾಜವಾದಿ ಪಕ್ಷ ಶೇ.26 ಮತಗಳಿಕೆಯೊಂದಿಗೆ 92- 97 ಸ್ಥಾನ ಗೆದ್ದು ಎರಡನೇ ಸ್ಥಾನದಲ್ಲಿ ನಿಲ್ಲಲಿದೆ. ಇನ್ನು ಬಿಎಸ್ಪಿ ಯ ಮಾಯಾವತಿ 79- 85 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.

27 ವರ್ಷಗಳಿಂದ ಉತ್ತರಪ್ರದೇಶದಲ್ಲಿ ಅಧಿಕಾರದಿಂದ ದೂರವಿರುವ ಕಾಂಗ್ರೆಸ್ ಕೇವಲ 5 ರಿಂದ 9 ಸೀಟು ಗಳಿಸಲಷ್ಟೇ ಸಾಧ್ಯ ಎಂದು ಸರ್ವೇ ಹೇಳಿದೆ.

ಮತ್ತೊಂದು ಕಡೆ ಎಬಿಪಿ ನ್ಯೂಸ್ – ಲೋಕನೀತಿ ಸಿಎಸ್‌ಡಿಎಸ್ ಸಮೀಕ್ಷೆ ಸಮಾಜವಾದಿ ಪಕ್ಷ 141 – 151 ಸ್ಥಾನ ಗೆಲ್ಲಲಿದೆ. ಬಿಜೆಪಿ 124 – ರಿಂದ 134 ಸ್ಥಾನ ಗಳಿಸಬಹುದು ಎಂದು ಹೇಳಿವೆ.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache