ಅಶ್ಲೀಲ ಚಿತ್ರ ವೀಕ್ಷಣೆ: ಸಿಎಂ ನಿರ್ಧಾರಕ್ಕೆ ಬದ್ಧ ಎಂದ ಸಚಿವ

ಟಿಪ್ಪು ಜಯಂತಿ ಆಚರಣೆ ವೇಳೆ ಮೊಬೈಲಿನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಆರೋಪ ಎದುರಿಸುತ್ತಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್, ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ನಂತರ ಮಾತನಾಡಿದ ಸಚಿವರು ಘಟನೆಯ ಕುರಿತು ಮುಖ್ಯಮಂತ್ರಿಗಳಿಗೆ ವಿವರಿಸಿದ್ದು, ಸಿಎಂ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಹೇಳಿದರು.

ಸುದ್ದಿ ವಾಹಿನಿಯ ವಿರುದ್ಧ ಯಾವುದೇ ದ್ವೇಷ ಸಾಧನೆಗೆ ದೂರು ನೀಡಿಲ್ಲ, ಬದಲಿಗೆ ಎಡಿಟ್ ಮಾಡದ ವೀಡಿಯೋ ಪಡೆಯಲು ಮಾತ್ರ ದೂರು ನೀಡಿದ್ದೇನೆ. ಅಶ್ಲೀಲ ಚಿತ್ರಗಳು ಇದ್ದದ್ದನ್ನು ಕಂಡು ಬೇರೆ ಸಂದೇಶಗಳನ್ನು ನೋಡಲು ಮುಂದಾದೆ, ಆದರೆ ಟಿವಿಗಳಲ್ಲಿ ಸಂಪೂರ್ಣ ವೀಡಿಯೋ ಪ್ರಸಾರ ಮಾಡಿಲ್ಲ. ನಾನು ಯಾವುದೇ ವೀಡಿಯೋ ನೋಡಿಲ್ಲ ಹಾಗೂ ಡೌನ್ಲೋಡ್ ಮಾಡಿಲ್ಲ ಎಂದು ಹೇಳಿದರು.