ಸಲ್ಮಾನ್ ಖಾನ್ ಜೊತೆ ಪ್ರಭಾಸ್ ಚಿತ್ರ? – News Mirchi

ಸಲ್ಮಾನ್ ಖಾನ್ ಜೊತೆ ಪ್ರಭಾಸ್ ಚಿತ್ರ?

ಬಾಹುಬಲಿ ಚಿತ್ರದ ಯಶಸ್ಸಿನ ನಂತರ ತೆಲುಗು ನಟ ಪ್ರಭಾಸ್ ನನ್ನು ಬಾಲಿವುಡ್ ಚಿತ್ರರಂಗ ಕರೆಯುತ್ತಿದೆ. ನಿರ್ಮಾಪಕ ಕರಣ್ ಜೋಹಾರ್ ಪ್ರಭಾಸ್ ನನ್ನು ಬಾಲಿವುಡ್ ನಲ್ಲಿ ಪರಿಚಯಿಸಲು ತಯಾರಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಪ್ರಭಾಸ್ ಮಾತ್ರ ಇದುವರೆಗೂ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಸದ್ಯ ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ತಯಾರಾಗುತ್ತಿರುವ ಸಾಹೋ ಚಿತ್ರದಲ್ಲಿ ನಟಿ ಅನುಷ್ಕಾ ಶೆಟ್ಟಿ ಜೊತೆ ಪ್ರಭಾಸ್ ನಟಿಸುತ್ತಿದ್ದಾರೆ.

ಮತ್ತೊಂದು ಕಡೆ ರೋಹಿತ್ ಶೆಟ್ಟಿ ನಿರ್ದೇಶನದ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಪ್ರಭಾಸ್ ನಟಿಸಲಿದ್ದಾರೆ ಎಂದು ಇತ್ತೀಚಿನ ಸುದ್ದಿಗಳು ಹೇಳುತ್ತಿವೆ. ನಿರ್ದೇಶಕ ರೋಹಿತ್ ಶೆಟ್ಟಿ ತೆಲುಗು ಸೂಪರ್ ಸ್ಟಾರ್ ಪ್ರಭಾಸ್ ಅವರೊಂದಿಗೆ ಚಿತ್ರ ಮಾಡಲು ಆಸಕ್ತರಾಗಿದ್ದಾರೆ ಎಂದು ಡಿ.ಎನ್.ಎ ವರದಿ ಮಾಡಿದೆ.

Loading...