ಗುಜರಾತ್ ರಾಜ್ಯಸಭೆ ಚುನಾವಣೆ: ಕಾಂಗ್ರೆಸ್ ಗೆ ಮತ್ತೊಂದು ಹೊಡೆತ? – News Mirchi

ಗುಜರಾತ್ ರಾಜ್ಯಸಭೆ ಚುನಾವಣೆ: ಕಾಂಗ್ರೆಸ್ ಗೆ ಮತ್ತೊಂದು ಹೊಡೆತ?

ಗುಜರಾತ್ ನಿಂದ ಕಾಂಗ್ರೆಸ್ ನಿಂದ ರಾಜ್ಯಸಭೆ ಸ್ಪರ್ಧಿಸುತ್ತಿರುವ ಅಹಮದ್ ಪಟೇಲ್ ಅವರಿಗೆ ಮತ್ತೊಂದು ಹೊಡೆತ. ಕಾಂಗ್ರೆಸ್ ಶಾಸಕರು ಬಿಜೆಪಿ ಕಡೆ ವಾಲುತ್ತಿದ್ದು, ಉಳಿದ ಶಾಸಕರನ್ನು ರೆಸಾರ್ಟ್ ಕಳುಹಿಸಿ ಪಕ್ಷದಲ್ಲೇ ಉಳಿಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಆದರೆ ಇದೀಗ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಪ್ರಫುಲ್ ಪಟೇಲ್ ಹೇಳಿಕೆ ಕಾಂಗ್ರೆಸ್ ಅನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.

ಸೋನಿಯಾ ಜೊತೆ ಅಹಮದ್ ಪಟೇಲ್

ರಾಜ್ಯಸಭೆ ಚುನಾವಣೆಯಲ್ಲಿ ಗುಜರಾತ್ ನಿಂದ ಯಾವ ಅಭ್ಯರ್ಥಿಗೆ ಬೆಂಬಲಿಸಬೇಕು ಎಂಬುದರ ಕುರಿತು ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ಪ್ರಫುಲ್ ಪಟೇಲ್ ಹೇಳಿದ್ದಾರೆ. 2012 ಗುಜರಾತ್ ವಿಧಾನಸಭೆಯ ಚುನಾವಣೆಯಲ್ಲಿ ಶರದ್ ಪವಾರ್ ನೇತೃತ್ವದ ಎನ್.ಸಿ.ಪಿ ಕಾಂಗ್ರೆಸ್ ನೊಂದಿಗೆ ಮೈತ್ರಿಮಾಡಿಕೊಂಡು ಸ್ಪರ್ಧಿಸಿತ್ತು. ಹೀಗಾಗಿ ಸಹಜವಾಗಿಯೇ ಎನ್.ಸಿ.ಪಿ ಕಾಂಗ್ರೆಸ್ ಗೆ ಬೆಂಬಲಿಸುತ್ತದೆ ಎಂದೇ ಎಲ್ಲರೂ ಇದುವರೆಗೂ ಭಾವಿಸಿದ್ದರು. ಸದ್ಯ ಗುಜರಾತ್ ವಿಧಾನಸಭೆಯಲ್ಲಿ ಎನ್.ಸಿ.ಪಿ ಯಿಂದ ಮೂವರು ಶಾಸಕರಿದ್ದಾರೆ.

ನಿಮ್ಮ ಉಗುರಿನ ಆಕಾರದಿಂದ ನಿಮ್ಮ ವ್ಯಕ್ತಿತ್ವ ತಿಳಿಯಿರಿ

ಎನ್.ಸಿ.ಪಿ. ನಾಯಕ ಪ್ರಫುಲ್ ಪಟೇಲ್

ಗುಜರಾತ್ ನಿಂದ ಮೂವರು ರಾಜ್ಯಸಭೆಗೆ ಆಯ್ಕೆಯಾಗುವ ಅವಕಾಶವಿದೆ. ಅವರಲ್ಲಿ ಬಿಜೆಪಿಯಿಂದ ಅಮಿತ್ ಶಾ, ಸ್ಮೃತಿ ಇರಾನಿಯವರು ಸುಲಭವಾಗಿ ಆಯ್ಕೆಯಾಗಲಿದ್ದಾರೆ. ಮೂರನೇ ಅಭ್ಯರ್ಥಿಯಾಗಿ ಕಾಂಗ್ರೆಸ್ ನ ಅಹಮದ್ ಪಟೇಲ್ ಕಣದಲ್ಲಿದ್ದು, ಅವರಿಗೆ 45 ಶಾಸಕರ ಬೆಂಬಲ ಬೇಕಾಗಿದೆ. ಹಿರಿಯ ನಾಯಕ ವಘೇಲಾ ಬೆಂಬಲಿಗರು ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದರಿಂದ ಕಾಂಗ್ರೆಸ್ ಬಲ ಈಗ 44ಕ್ಕೆ ಇಳಿದಿದೆ. ಈ ಹಿನ್ನೆಲೆಯಲ್ಲಿ ಅಹಮದ್ ಪಟೇಲ್ ಗೆಲ್ಲಲು ಎನ್.ಸಿ.ಪಿ ಬೆಂಬಲ ಬೇಕೇ ಬೇಕು.

ಕೆಲಸ ಮಾಡಿ ಇಲ್ಲವೇ ತೊಲಗಿ: ಮತ್ತಿಬ್ಬರು ಐಪಿಎಸ್ ಅಧಿಕಾರಿಗಳು ಮನೆಗೆ

Loading...