ಗೃಹಸಚಿವಾಲಯದ ಶಿಫಾರಸ್ಸು ತಿರಸ್ಕರಿಸಿ ಕ್ಷಮಾದಾನ ನೀಡಿದ ರಾಷ್ಟ್ರಪತಿಗಳು |News Mirchi

ಗೃಹಸಚಿವಾಲಯದ ಶಿಫಾರಸ್ಸು ತಿರಸ್ಕರಿಸಿ ಕ್ಷಮಾದಾನ ನೀಡಿದ ರಾಷ್ಟ್ರಪತಿಗಳು

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೇಂದ್ರ ಗೃಹ ಸಚಿವಾಲಯದ ಶಿಫರಾಸ್ಸುಗಳನ್ನು ಬದಿಗೆ ಸರಿಸಿ ಗಲ್ಲುಶಿಕ್ಷೆಯಾಗಿದ್ದ ನಾಲ್ವರು ಖೈದಿಗಳಿಗೆ ಕ್ಷಮಾದಾನ ನೀಡಿದ್ದಾರೆ. ಇವರಿಗೆ ವಿಧಿಸಿದ್ದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿ ಸಹಿ ಮಾಡಿದ್ದಾರೆ.

1992 ರಲ್ಲಿ ಬಿಹಾರದಲ್ಲಿ ಸವರ್ಣೀಯರಿಗೆ ಸೇರಿದ 34 ಜನರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಕೃಷ್ಣ ಮೋಚಿ, ನನ್ಹೇಲಾಲ್ ಮೋಚಿ, ಬಿರ್ಕೀರ್ ಪಾಸ್ವಾನ್, ಧರ್ಮೇಂದ್ರ ಸಿಂಗ್ ಅಲಿಯಾಸ್ ದಾರೂಸಿಂಗ್ ಅವರಿಗೆ 2001 ರಲ್ಲಿ ಸೆಷನ್ಸ್ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಸುಪ್ರೀಂ ಕೋರ್ಟ್ ಸಹಾ ಸೆಷನ್ಸ್ ಕೊರ್ಟ್ ತೀರ್ಪನ್ನು ಎತ್ತಿಹಿಡಿದಿತ್ತು.

ಈ ಹಿನ್ನೆಲೆಯಲ್ಲಿ ಇವರ ಪರವಾಗಿ ಬಿಹಾರ ಸರ್ಕಾರ ಸಲ್ಲಿದ್ದ ಕ್ಷಮಾದಾನ ಅರ್ಜಿಯನ್ನು ಕೇಂದ್ರ ಗೃಹ ಇಲಾಖೆ ಕಳೆದ ವರ್ಷ ಆಗಸ್ಟ್ 8 ರಂದು ತಿರಸ್ಕರಿಸಿತ್ತು. ಈ ಪ್ರಕರಣದಲ್ಲಿ ಕ್ಷಮಾದಾನ ಅರ್ಜಿ ಪರಿಶೀಲನೆಯಲ್ಲಿ ನಡೆದ ವಿಳಂಬ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಗಮನಕ್ಕೆ ತಂದ ಕೆಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿ ರಾಷ್ಟ್ರಪತಿಗಳು ಸಹಿ ಮಾಡಿದ್ದಾರೆ.

Loading...
loading...
error: Content is protected !!