ಪ್ರಶಾಂತ್ ಕಿಶೋರ್ ರನ್ನು ಹುಡುಕಿ ಕೊಟ್ಟವರಿಗೆ 5 ಲಕ್ಷ

ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವಂತೆ ಕೆಲಸ ಮಾಡಲು ಕಾಂಗ್ರೆಸ್ ಕರೆತಂದಿದ್ದ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್, ಕಾಂಗ್ರೆಸ್ ಹೀನಾಯ ಸೋಲು ಕಂಡ ನಂತರ ಎಲ್ಲಿದ್ದಾರೆಂಬುದೇ ತಿಳಿಯುತ್ತಿಲ್ಲವಂತೆ

ಪ್ರಶಾಂತ್ ಕಿಶೋರ್ ರವರನ್ನು ಹುಡುಕಿ ಕಾಂಗ್ರೆಸ್ ಕಾರ್ಯಕರ್ತರ ಮುಂದೆ ಕರೆತಂದವರಿಗೆ ರೂ.5 ಲಕ್ಷ ನೀಡುತ್ತೇವೆ ಎಂಬ ಪೋಸ್ಟರ್ ಒಂದು ಲಕ್ನೋದಲ್ಲಿನ ಪಕ್ಷದ ಕಛೇರಿ ಮುಂದೆ ಕಾಣಿಸಿಕೊಂಡಿದೆ. ಉತ್ತರಪ್ರದೇಶದ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಈ ಪ್ರಕಟಣೆ ಮಾಡಿದ್ದಾರೆ.

ಪಕ್ಷದ ಕಾರ್ಯಕರ್ತರ ಕೆಲ ಪ್ರಶ್ನೆಗಳಿಗೆ ಉತ್ತರ ಬೇಕಿದೆ ಎಂದು ಅವರು ಹೇಳಿದ್ದಾರೆ. ಪಕ್ಷದ ನಾಯಕರ ಸೂಚನೆಯಂತೆ ನಾವು ಪ್ರಶಾಂತ್ ಕಿಶೋರ್ ಹೇಳಿದ್ದನ್ನೆಲ್ಲಾ ಮರುಪ್ರಶ್ನಿಸದೆ ಮೂರ್ಖರಂತೆ ಮಾಡಿದ್ದೇವೆ. ಈಗ ನಮಗೆ ಕೆಲ ಉತ್ತರಗಳನ್ನು ಅವರು ನೀಡಬೇಕಿದೆ ಎಂದರು.

ಉತ್ತರಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್ ಮಾತ್ರ ಕೂಡಲೇ ಈ ಪೊಸ್ಟರ್ ತೆಗೆಯುವಂತೆ ಸೂಚಿಸಿದ್ದಾರೆ. ಫಲಿತಾಂಶಕ್ಕೆ ಇಷ್ಟು ಬೇಗ ಯಾರನ್ನೂ ದೂಷಿಸುವುದು ಸರಿಯಲ್ಲ ಎಂದು ರಾಜ್ ಬಬ್ಬರ್ ಹೇಳಿದ್ದಾರೆ.

Loading...

Leave a Reply

Your email address will not be published.

error: Content is protected !!