ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಲೆಕ್ಷನ್ ಗೆ ನಿಂತಿರುವುದು ಪ್ರತಿಭಾ ಹಂತಕ! |News Mirchi

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಲೆಕ್ಷನ್ ಗೆ ನಿಂತಿರುವುದು ಪ್ರತಿಭಾ ಹಂತಕ!

ಬೆಂಗಳೂರು: ವಿಶೇಷ ಸವಲತ್ತು ನೀಡಲು ಅಕ್ರಮ ಅಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾಳಿಂದ ಹಿರಿಯ ಕಾರಾಗೃಹ ಅಧಿಕಾರಿಗೆ 2 ಕೋಟಿ ಲಂಚ ನೀಡಲಾಗಿದೆ ಎಂಬ ಆರೋಪದ ಬೆನ್ನಲ್ಲೇ ಮತ್ತೊಂದು ಸ್ಪೋಟಕ ಸುದ್ದಿ ಹೊರಬಿದ್ದಿದೆ. ಕಾಲ್ ಸೆಂಟರ್ ಉದ್ಯೋಗಿ ಪ್ರತಿಭಾ ಹಂತಕನಿಗೆ ಜೈಲಿನಲ್ಲಿ ಕಲೆಕ್ಷನ್ ಕೆಲಸ ವಹಿಸಲಾಗಿದೆ ಎಂದು ಪಬ್ಲಿಕ್ ಟಿವಿ ವರದಿ ಮಾಡಿದೆ. ಹೀಗೆ ಜೈಲಿನಲ್ಲಿ ಪ್ರತಿ ತಿಂಗಳು 20 ಲಕ್ಷ ಹಣ ಸಂಗ್ರಹ ಮಾಡಿ ಅಧಿಕಾರಿಗಳಿಗೆ ನೀಡುತ್ತಾನೆ ಎನ್ನಲಾಗಿದೆ.

ಆರೋಪ ಹೊತ್ತವರಿಂದಲೇ ಜೈಲಿನಲ್ಲಿ ಪರಿಶೀಲನೆ!

ಜೈಲಿನಲ್ಲಿ ಊಟದ ಉಸ್ತುವಾರಿ ಜೊತೆಗೆ ಜೈಲಿನಲ್ಲಿ ವಿಶೇಷ ಅಧಿಕಾರ ಹೊಂದಿದ್ದಾನೆ ಪ್ರತಿಭಾ ಹಂತಕ ಶಿವಕುಮಾರ್. ಜೈಲಿನಲ್ಲಿ ಈತ ಆಡಿದ್ದೇ ಆಟ, ಯಾರಿಗೆ ಯಾವ ಕೆಲಸ ಒಪ್ಪಿಸಬೇಕು ಎಂದು ನಿರ್ಧರಿಸುವುದೂ ಈತನೇ ಎಂದು ಹೇಳಲಾಗುತ್ತಿದೆ. ಕಾಲ್ ಸೆಂಟರ್ ಉದ್ಯೋಗಿ ಪ್ರತಿಭಾ ಶ್ರೀಕಂಠಮೂರ್ತಿ ಎಂಬ ಮಹಿಳೆಯನ್ನು ಅಪಹರಿಸಿ ಅತ್ಯಾಚಾರವೆಸಗಿ ನಂತರ ಕೊಲೆಗೈದಿದ್ದ ಕ್ಯಾಬ್ ಚಾಲಕ ಈ ಶಿವಕುಮಾರ್.

Loading...
loading...
error: Content is protected !!