6 ನೇ ತರಗತಿ ಗರ್ಭಿಣಿ ಬಾಲಕಿಗೆ ಗರ್ಭಪಾತ ಮಾತ್ರೆ ನೀಡಿದ ಶಾಲಾ ಸಿಬ್ಬಂದಿ – News Mirchi

6 ನೇ ತರಗತಿ ಗರ್ಭಿಣಿ ಬಾಲಕಿಗೆ ಗರ್ಭಪಾತ ಮಾತ್ರೆ ನೀಡಿದ ಶಾಲಾ ಸಿಬ್ಬಂದಿ

ಜಾರ್ಖಂಡ್: ಗರ್ಭ ಧರಿಸಿದ್ದ 6 ನೇ ತರಗತಿಯ ಬಾಲಕಿಯ ವಿಷಯ ಬೆಳಕಿಗೆ ಬಂದರೆ ಶಾಲೆಗೆ ಕೆಟ್ಟ ಹೆಸರು ಬರುತ್ತದೆ ಎಂಬ ಕಾರಣಕ್ಕೆ, ಜಾರ್ಖಂಡ್ ನ ವಸತಿ ಶಾಲೆಯ ಸಿಬ್ಬಂದಿ ಬಲವಂತವಾಗಿ ಗರ್ಭಪಾತ ಮಾತ್ರೆ ನೀಡಿದ ವಿಷಯ ಬೆಳಕಿಗೆ ಬಂದಿದೆ.

ಜಾರ್ಖಂಡ್ ನ ಗರ್ಹ್ವಾ ಜಿಲ್ಲೆಯ ಕಸ್ತೂರ್ಬಾ ಗಾಂಧಿ ಬಾಲಕಿಯರ ವಿದ್ಯಾಲಯದ ಸಿಬ್ಬಂದಿ, ವೈದ್ಯರ ಸಲಹೆಯನ್ನೂ ಪಡೆಯದೆ ಬಲವಂತವಾಗಿ ಬಾಲಕಿಗೆ ಗರ್ಭಪಾತ ಮಾತ್ರೆ ನುಂಗಲು ನೀಡಿದ್ದು ಬಾಲಕಿಯ ಜೀವಕ್ಕೇ ಅಪಾಯ ತಂದೊಡ್ಡಿದ್ದರು. ಬಾಲಕಿಯ ಆರೋಗ್ಯ ಹದಗೆಟ್ಟಾಗ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯ ವೈದ್ಯರು ಸೂಕ್ತ ರೀತಿಯಲ್ಲಿ ಗರ್ಭಪಾತ ಮಾಡಿಸಿ ಆಕೆಯ ಜೀವ ಉಳಿಸಿದ್ದಾರೆ.

ವಿಷಯ ತಮ್ಮ ಗಮನಕ್ಕೆ ತಂದಿಲ್ಲ ಎಂದು ಜಿಲ್ಲಾಡಳಿತ ಹೇಳಿದ್ದರೆ, ಒಂದು ವೇಳೆ ಬಾಲಕಿಯ ಪೋಷಕರು ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಗರ್ಹ್ವಾ ಪೊಲೀಸ್ ಸೂಪರಿಂಟೆಂಡೆಂಟ್ ಹೇಳಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಶಿಕ್ಷಣ ಅಧೀಕ್ಷಕರು, ಈ ಕುರಿತು ತನಿಖೆ ನಡೆಯುತ್ತಿದೆ, ಶೀಘ್ರದಲ್ಲೇ ಸತ್ಯ ಹೊರಬರಲಿದೆ ಎಂದು ಭರವಸೆ ನೀಡಿದ್ದಾರೆ.

English Summary: A pregnant class VI student of a government residential school in Jharkhand was forced to take abortion pills by school officials to save the institution from ‘falling into disrepute’.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!