ರಾಷ್ಟ್ರಪತಿ ಅಭ್ಯರ್ಥಿ ವಿಷಯದಲ್ಲಿ ಒಮ್ಮತಕ್ಕೆ ಪ್ರಯತ್ನ – News Mirchi

ರಾಷ್ಟ್ರಪತಿ ಅಭ್ಯರ್ಥಿ ವಿಷಯದಲ್ಲಿ ಒಮ್ಮತಕ್ಕೆ ಪ್ರಯತ್ನ

ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಚರ್ಚಿಸಿ ಬೆಂಬಲ ಗಳಿಸಲು ಬಿಜೆಪಿ ತೀರ್ಮಾನಿಸಿದೆ. ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಈ ವಿಷಯವನ್ನು ಹೇಳಿದ್ದಾರೆ. ರಾಷ್ಟ್ರಪತಿ ಆಯ್ಕೆ ವಿಷಯದಲ್ಲಿ ಇತರೆ ಪಕ್ಷಗಳಿಂದ ಸಲಹೆಗಳನ್ನು ತೆಗೆದುಕೊಂಡು, ಸಾಧ್ಯವಾದಷ್ಟು ಒಮ್ಮತ ಮೂಡಿಸುವ ಪ್ರಯತ್ನ ನಡೆಸುತ್ತೇವೆ ಎಂದು ಅವರು ಹೇಳಿದರು. ಇದೇ ತಿಂಗಳು 18 ರಿಂದ ರಾಷ್ಟ್ರಪತಿ ಅಭ್ಯರ್ಥಿ ವಿಷಯದಲ್ಲಿ ಎಲ್ಲಾ ಪಕ್ಷಗಳೊಂದಿಗೆ ಚರ್ಚೆ ನಡೆಸುತ್ತೇವೆ ಎಂದು ವೆಂಕಯ್ಯ ಹೇಳಿದರು.

Loading...