ಮೆಟ್ರೋ ಮೊದಲ ಹಂತ ಲೋಕಾರ್ಪಣೆ |News Mirchi

ಮೆಟ್ರೋ ಮೊದಲ ಹಂತ ಲೋಕಾರ್ಪಣೆ

ಬೆಂಗಳೂರು: ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಇಂದು ವಿಧಾನಸೌಧ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಜ್ಯೋತಿ ಬೆಳಗುವ ಮೂಲಕ 42.3 ಕಿ.ಮೀ ಉದ್ದದ ಮೆಟ್ರೋ ಮೊದಲ ಹಂತವನ್ನು ಲೋಕಾರ್ಪಣೆ ಮಾಡಿದರು. ಸಂಪಿಗೆ ರಸ್ತೆ – ಯಲಚೇನಹಳ್ಳಿ ನಡುವಿನ ಮಾರ್ಗಕ್ಕೆ ಚಾಲನೆ ನೀಡುವ ಮೂಲಕ ಮೊದಲ ಹಂತದ ಮೆಟ್ರೋ ಸಂಪೂರ್ಣ ಸೇವೆ ಸಾರ್ವಜನಿಕೆ ಮುಕ್ತವಾಗಿದೆ. ಇದರೊಂದಿಗೆ ಪೂರ್ಣ ಪ್ರಮಾಣ ಮೆಟ್ರೋ ಸೇವೆಗಳನ್ನು ಹೊಂದಿರುವ ದೇಶದ ಕೆಲವೇ ನಗರಗಳಲ್ಲಿ ನಗರಗಳಲ್ಲಿ ಬೆಂಗಳೂರು ಒಂದಾಗಿದೆ.

ಸಮಾರಂಭದಲ್ಲಿ ರಾಜ್ಯಪಾಲ ವಜೂಬಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ವೆಂಕಯ್ಯ ನಾಯ್ಡು, ಡಿ.ವಿ.ಸದಾನಂದಗೌಡ, ಅನಂತಕುಮಾರ್, ವಿಧಾನಪರಿಷತ್ ಸಭಾಪತಿ ಡಿ.ಹೆಚ್.ಶಂಕರಮೂರ್ತಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮುಂತಾದವರು ಪಾಲ್ಗೊಂಡಿದ್ದರು.

ಬೆಂಗಳೂರು ಮೆಟ್ರೋ ರೈಲ್ವೇ ಕಾರ್ಪೊರೇಷನ್ ಈಗಾಗಲೇ ಬೇರೆ ಹಂತಗಳ ಮೆಟ್ರೋ ಮಾರ್ಗ ಕಾಮಗಾರಿಯಲ್ಲಿ ತೊಡಗಿದ್ದು, 2020 ರ ವೇಳೆಗೆ 2 ನೇ ಹಂತದ ಕಾಮಗಾರಿ ಮುಗಿಯುತ್ತದೆ.

Loading...
loading...
error: Content is protected !!