ಟಿಪ್ಪುವನ್ನು ಶ್ಲಾಘಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ – News Mirchi

ಟಿಪ್ಪುವನ್ನು ಶ್ಲಾಘಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್

ಬೆಂಗಳೂರು : ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಿಧಾನಸೌಧದ ಮುಖ್ಯ ಅತಿಥಿಯಾಗಿ ಭಾಷಣ ಮಾಡುವ ವೇಳೆ ಟಿಪ್ಪು ಸುಲ್ತಾನ್ ಸ್ಮರಣೆ ಮಾಡಿದ್ದಾರೆ.

ವಿಧಾನಸೌಧದಲ್ಲಿ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಅವರು ಟಿಪ್ಪು ಅಪ್ರತಿಮ ವೀರನಾಗಿದ್ದು, ಸೇನೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಕೊಂಡಿದ್ದ. ನಾಡಿನ ಅಭಿವೃದ್ಧಿಯ ಪಥ ಬದಲಿಸಿದ ಮುಂಚೂಣಿಯ ನೇತಾರ. ಬ್ರಿಟಿಷರ ವಿರುದ್ಧ ಹೋರಾಡಿ ವೀರಮರಣವನ್ನಪ್ಪಿದ. ಯುದ್ಧ ಭೂಮಿಯಲ್ಲಿ ಮೈಸೂರ್ ರಾಕೆಟ್ ಬಳಸಿದ ಅಪ್ರತಿಮ ನಾಯಕ. ಯುರೋಪಿಯನ್ನರು ಟಿಪ್ಪು ರೂಪಿಸಿದ್ದ ರಾಕೆಟ್ ತಂತ್ರಜ್ಞಾನವನ್ನು ನಂತರ ಬಳಸಿಕೊಂಡರು ಎಂದು ಟಿಪ್ಪುವನ್ನು ಬಣ್ಣಿಸಿದರು.

ರಾಷ್ಟ್ರಪತಿಯವರ ಈ ಮಾತಿಗೆ ಕಾಂಗ್ರೆಸ್ ನಾಯಕರು ಮೇಜು ಕುಟ್ಟಿ ತಮ್ಮ ಹರ್ಷ ವ್ಯಕ್ತಪಡಿಸಿದರೆ, ಬಿಜೆಪಿ ನಾಯಕರಿಗೆ ಇರಿಸು ಮುರಿಸುಂಟಾಯಿತು. ಕರ್ನಾಟಕ ಸಾಂಸ್ಕೃತಿಕ ಮತ್ತು ಭಾಷಿಕ ವೈಶಿಷ್ಟ್ಯವನ್ನು ಉಳಿಸಿಕೊಂಡೇ ಇಡೀ ದೇಶದ ಯುವಕರನ್ನು ಸೆಳೆಯುವ ಮಿನಿ ಇಂಡಿಯಾ ಆಗಿದೆ. ಕರ್ನಾಟಕದವರ ಕನಸು ಇಡೀ ದೇಶದ ಅಭಿವೃದ್ಧಿ ಕಡೆಗಿರಲಿ. ಭಾರತ ಪ್ರಕಾಶಮಾನವಾಗಲು ಕರ್ನಾಟಕದ ಕಡೆನೋಡುವ ಅಗತ್ಯವಿದೆ. ಕರ್ನಾಟಕದ ಉಭಯ ಸದನಗಳ ಸದಸ್ಯರಿಗೆ ಹೆಚ್ಚು ಜವಾಬ್ದಾರಿಯಿದೆ ಎಂದರು. ಇದೇ ವೇಳೆ ರಾಷ್ಟ್ರಪತಿಯವರೊಂದಿಗೆ ಫೋಟೋ ಸೆಶನ್ ಕೂಡ ನಡೆಯಿತು.

Get Latest updates on WhatsApp. Send ‘Add Me’ to 8550851559

Loading...