ನಾನು ದೇವರು, ನನ್ನನ್ನು ರಾಷ್ಟ್ರಪತಿ ಮಾಡದಿದ್ದರೆ ದೆಹಲಿ ಸರ್ವನಾಶ |News Mirchi

ನಾನು ದೇವರು, ನನ್ನನ್ನು ರಾಷ್ಟ್ರಪತಿ ಮಾಡದಿದ್ದರೆ ದೆಹಲಿ ಸರ್ವನಾಶ

ತನ್ನನ್ನು ತಾನು ದೇವರು ಎಂದು ಬಣ್ಣಿಸಿಕೊಂಡ ಜ್ಯೋತಿಷಿಯೊಬ್ಬರು, ರಾಷ್ಟ್ರಪತಿ ಚುನಾವಣೆ ವಿಷಯದಲ್ಲಿ ಸುದ್ದಿಯಾಗಿದ್ದಾರೆ. ಎನ್ಡಿಎ, ಪ್ರತಿಪಕ್ಷಗಳ ಅಭ್ಯರ್ಥಿಗಳಾಗಿ ಕಣದಲ್ಲಿರುವ ರಾಮನಾಥ್ ಕೋವಿಂದ್, ಮೀರಾ ಕುಮಾರ್ ರವರಲ್ಲಿ ಇಬ್ಬರೂ ರಾಷ್ಟ್ರಪತಿಗಳಾಗುವುದಿಲ್ಲ. ಆ ಹುದ್ದೆಗೆ ನಾನೇ ಎಲ್ಲಾ ರೀತಿಯಿಂದಲೂ ಅರ್ಹ ವ್ಯಕ್ತಿ ಎಂದು ನಾಮಪತ್ರ ದಾಖಲೆಗಳಲ್ಲಿ ಬರೆದಿದ್ದಾರೆ.

ಹರಿಯಾಣದ ಪಾಣಿಪತ್ ನ ಜೋತಿಷಿ ದೇವಿದಯಾಳ್ ಅಗರ್ವಾಲ್ ರಾಷ್ಟ್ರಪತಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರಕ್ಕೆ ಸಂಬಂಧಿಸಿದ ದಾಖಲೆಗಳಲ್ಲಿ ತನ್ನನ್ನು ತಾನು ದೇವರಂತೆ, ಸರ್ವಶಕ್ತನಂತೆ ಹೇಳಿಕೊಂಡಿದ್ದಾರೆ. ಅಷ್ಟಕ್ಕೇ ನಿಲ್ಲಿಸದೇ, ತಾನು ಗೆಲ್ಲಲು ಯಾವ ಶಾಸಕರು, ಸಂಸದರ ಬೆಂಬಲವೂ ಬೇಕಿಲ್ಲ, ಏಕೆಂದರೆ ಗೆಲ್ಲೋದು ನಾನೇ. ರಾಮನಾಥ್ ಕೋವಿಂದ್ ಮತ್ತು ಮೀರಾಕುಮಾರ್ ರವರ ಬಳಿ ವಿಶೇಷ ಶಕ್ತಿಯೇನೂ ಇಲ್ಲ, ಹಾಗಾಗಿ ನನ್ನ ಗೆಲುವು ಖಚಿತ. ನನ್ನನ್ನು ರಾಷ್ಟ್ರಪತಿಯನ್ನಾಗಿ ಮಾಡದಿದ್ದರೆ ದೆಹಲಿ ಸರ್ವನಾಶವಾಗುತ್ತದೆ ಎಚ್ಚರಿಕೆ ಎಂದು ಬರೆದಿದ್ದಾರೆ.

ಇದೆಲ್ಲಾ ನೋಡಿ ನಕ್ಕು ಸುಮ್ಮನಾದ ರಿಟರ್ನಿಂಗ್ ಅಧಿಕಾರಿಗಳು, ಕೊನೆಗೆ “ದೇವರ” ನಾಮಪತ್ರ ತಿರಸ್ಕರಿಸುತ್ತಿರುವುದಾಗಿ ಪ್ರಕಟಿಸಿದ್ದಾರೆ. ಶನಿವಾರ (ಜುಲೈ 1) ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಅವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ದಾಖಲಾದ ಎಲ್ಲಾ 95 ನಾಮಪತ್ರಗಳನ್ನು ಚುನಾವಣಾ ಅಧಿಕಾರಿಗಳು ಪರಿಶೀಲಿಸಿದರು. ಅವುಗಳಲ್ಲಿ ರಾಮನಾಥ್ ಮತ್ತು ಮೀರಾಕುಮಾರ್ ಅವರಿಬ್ಬರ ನಾಮಪತ್ರಗಳು ಹೊರತುಪಡಿಸಿ ಉಳಿದ 93 ನಾಮಪತ್ರಗಳು ತಿರಸ್ಕೃತಗೊಂಡಿವೆ.

[ಭಾರತಕ್ಕೂ ಬರಲಿದೆ ಫೇಸ್ಬುಕ್ ನ ಈ ಅದ್ಭುತ ಫೀಚರ್]

ರಾಷ್ಟ್ರಪತಿ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದವರಲ್ಲಿ ಹಲವರು ವಿಚಿತ್ರವಾಗಿ ನಡೆದುಕೊಂಡಿದ್ದಾರೆ. ಹರಿಯಾಣದ ಮತ್ತೊಬ್ಬ ಅಭ್ಯರ್ಥಿ ವಿನೋದ್ ಕುಮಾರ್ ಎಂಬಾತ ತನ್ನ ನಾಮಪತ್ರದಲ್ಲಿ ಸೂಚಕರ ಪಟ್ಟಿಯಲ್ಲಿ ಭಗತ್ ಸಿಂಗ್, ಐನ್ ಸ್ಟೀನ್, ಜಾನ್ ಎಫ್ ಕೆನಡಿ, ಸ್ವಾಮಿ ವಿವೇಕಾನಂದ, ನೇತಾಜಿ ಸುಭಾಷ್ ಚಂದ್ರ ಬೋಸ್, ಅಬ್ರಹಾಂ ಲಿಂಕನ್, ನೆಲ್ಸನ್ ಮಂಡೇಲಾ, ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಮುಂತಾದವರ ಹೆಸರುಗಳನ್ನು ಬರೆದಿದ್ದಾರೆ. ಇನ್ನೂ ಕೆಲವರು ಬಾಲಿವುಡ್ ನಟರು, ಪ್ರಮುಖ ಉದ್ಯಮಿಗಳ ಬೆಂಬಲ ತಮಗಿದೆ ಎಂದು ನಾಮಪತ್ರಗಳಲ್ಲಿ ಬರೆದಿದ್ದಾರೆ.

Loading...
loading...
error: Content is protected !!