ರಾಷ್ಟ್ರಪತಿ ಚುನಾವಣೆ: 90ಕ್ಕೂ ಹೆಚ್ಚು ನಾಮಪತ್ರಗಳು ತಿರಸ್ಕೃತ – News Mirchi

ರಾಷ್ಟ್ರಪತಿ ಚುನಾವಣೆ: 90ಕ್ಕೂ ಹೆಚ್ಚು ನಾಮಪತ್ರಗಳು ತಿರಸ್ಕೃತ

ನವದೆಹಲಿ: ಹಲವರು ಭಾರತದ ರಾಷ್ಟ್ರಪತಿ ಚುನಾವಣೆ ಕಣಕ್ಕೆ ಇಳಿಯಲು ಮುಂದಾಗಿದ್ದು, ಅವರಲ್ಲಿ 90ಕ್ಕೂ ಹೆಚ್ಚು ಜನರ ನಾಮಪತ್ರಗಳನ್ನು ಚುನಾವಣಾ ಆಯೋಗ ತಿರಸ್ಕರಿಸಿದೆಯಂತೆ. ಎನ್.ಡಿ.ಎ ಯಿಂದ ರಾಮನಾಥ್ ಕೋವಿಂದ್, ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳಿಂದ ಮೀರಾ ಕುಮಾರ್ ಮಾತ್ರ ಸ್ಪರ್ಧೆಯಲ್ಲಿ ಉಳಿದುಕೊಂಡಿರುವುದು ವಿಶೇಷ.

ಸೂಕ್ತ ದಾಖಲೆಗಳು ಸಲ್ಲಿಸದ ಸಹಿಗಳು ಸರಿಯಾಗಿಲ್ಲದ ಕಾರಣದ ಜೊತೆ ಸಂಸದರ, ಶಾಸಕರ ಬೆಂಬಲವಿಲ್ಲವೆಂಬ ಕಾರಣಕ್ಕೆ 90 ಕ್ಕೂ ಹೆಚ್ಚು ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ. ಅಂತಿಮವಾಗಿ ರಾಮನಾಥ್ ಕೋವಿಂದ್, ಮೀರಾ ಕುಮಾರ್ ದಾಖಲಿಸಿರುವ ನಾಮಿನೇಷನ್ ಗಳೂ ಮಾತ್ರ ಉಳಿದುಕೊಂಡಿವೆ.

Contact for any Electrical Works across Bengaluru

Loading...
error: Content is protected !!