ರಾಷ್ಟ್ರಪತಿ ಚುನಾವಣೆ ಫಲಿತಾಂಶ ಇಂದು |News Mirchi

ರಾಷ್ಟ್ರಪತಿ ಚುನಾವಣೆ ಫಲಿತಾಂಶ ಇಂದು

ಇಡೀ ಭಾರತ ಕುತೂಹಲದಿಂದ ಕಾಯುತ್ತಿರುವ ರಾಷ್ಟ್ರಪತಿ ಚುನಾವಣೆ ಫಲಿತಾಂಶ ಇಂದು ಬಿಡುಗಡೆಯಾಗಲಿದೆ. ಎನ್.ಡಿ.ಎ ಅಭ್ಯರ್ಥಿ ರಾಮನಾಥ್ ಕೋವಿಂದ್, ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ಸ್ಪರ್ಧಿಸಿದ್ದ ಚುನಾವಣಾ ಮತ ಎಣಿಕೆ ಇಂದು ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ.

ಮೊದಲು ಸಂಸತ್ ಭವನದಲ್ಲಿರುವ ಮತ ಪೆಟ್ಟಿಗೆಗಳನ್ನು ಎಣಿಕೆ ಮಾಡಲಿದ್ದಾರೆ. ನಂತರ ಎಲ್ಲಾ ರಾಜ್ಯಗಳಿಂದ ಬಂದ ಮತಪೆಟ್ಟಿಗೆಗಳನ್ನು ಆಂಗ್ಲ ವರ್ಣಮಾಲೆ ಕ್ರಮದಲ್ಲಿ ಎಣಿಕೆಗೆ ತೆಗೆದುಕೊಳ್ಳುತ್ತಾರೆ. ನಾಲ್ಕು ಮೇಜುಗಳ ಮೇಲೆ 8 ಸುತ್ತುಗಳು ಮತ ಎಣಿಕೆ ಮುಂದುವರೆಯುತ್ತದೆ. ಸಂಜೆ 5 ಗಂಟೆಗೆ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.

Loading...
loading...
error: Content is protected !!