ಕೊಲ್ಲೂರು ಮತ್ತು ಉಡುಪಿ ಮಠಕ್ಕೆ ರಾಷ್ಟ್ರಪತಿ

ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಜೂನ್ 18 ರಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಹಾಗೂ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ. ಹೀಗಾಗಿ ಶ್ರೀಕೃಷ್ಣ ಮಠದಲ್ಲಿ ಅಂದು ಭಕ್ತರಿಗೆ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಪ್ರವೇಶವಿರುವುದಿಲ್ಲ. ಹಾಗೆಯೇ ಕೊಲ್ಲೂರಿನಲ್ಲೂ ಬೆಳಗ್ಗೆ 10:30 ರಿಂದ 6 ಗಂಟೆಯವರೆಗೆ ಭಕ್ತರಿಗೆ ದರ್ಶನವಿರುವುದಿಲ್ಲ. ಭಕ್ತಾದಿಗಳು ಬೆಳಗ್ಗೆ 10:30 ರೊಳಗೆ ದೇವರ ದರ್ಶನ ಮುಗಿಸಿಕೊಳ್ಳಬೇಕು, ಇಲ್ಲವೆಂದರೆ ಸಂಜೆ 6 ಗಂಟೆಯ ನಂತರ ದರ್ಶನ ಪಡೆಯಬಹುದು.