33 ರೀತಿಯ ಔಷಧಿಗಳ ದರ ಕಡಿತ

ಗಂಭೀರ ಖಾಯಿಲೆಗಳಿಗೆ ಬಳಸುವ ಔಷಧಿಗಳು ಕಡಿಮೆ ಬೆಲೆಯಲ್ಲಿ ಸಿಗುವಂತೆ ಮಾಡಲು 33 ಮುಖ್ಯವಾದ ಔಷಧಿಗಳ ದರಗಳನ್ನು ಡ್ರಗ್ ಪ್ರೈಸ್ ರೆಗ್ಯುಲೇಟರಿ ಕಡಿಮೆ ಮಾಡಿದೆ. 11 ರೀತಿಯ ಔಷಧಿಗಳಿಗೆ ದರ ನಿಗಧಿ ಮಾಡಿದ್ದು, ಇತರೆ 22 ರೀತಿಯ ಔಷಧಿಗಳ ದರ ಪರಿಷ್ಕೃತಗೊಳಿಸಿದೆ. ಇವುಗಳ ರೀಟೇಲ್ ದರಗಳಲ್ಲಿ ಶೇ.30 ರಿಂದ ಶೇ.50 ರವರೆಗೆ ಕಡಿಮೆ ಮಾಡುತ್ತಿರುವುದಾಗಿ ನ್ಯಾಷನಲ್ ಫಾರ್ಮಾಸಿಕಲ್ಸ್ ಪ್ರೈಸಿಂಗ್ ಅಥಾರಿಟಿ(ಎನ್‌ಪಿಪಿಎ) ಹೇಳಿದೆ.

ದರ ಕಡಿಮೆಯಾದ ಮೆಡಿಸಿನ್ ಗಳಲ್ಲಿ ಶೀತ, ಕೆಮ್ಮು, ಯಾಂಟಿ ಬಯೋಟಿಕ್ಸ್ ಸೇರಿದಂತೆ ಹಲವು ವಿಧದ ಔಷಧಿಗಳಿವೆ. ತಯಾರಕರು ತೀರ್ಮಾನಿಸಿದ ದರಗಳನ್ನು ಪಾಲಿಸದ ಕಂಪನಿಗಳು, ಡ್ರಗ್ಸ್ ಆರ್ಡರ್ 2013 ಪ್ರಾವಿಷನ್ಸ್ ಅಡಿಯಲ್ಲಿ ರೆಗ್ಯುಲೇಟರಿ ಬಳಿ ಹೆಚ್ಚು ಮೊತ್ತದ ಠೇವಣಿ ಇರಬೇಕಿರುತ್ತದೆ ಎಂದು ಹೇಳಿದೆ.

ಗಂಭೀರ ಖಾಯಿಲೆಗಳಿಗೆ ಸಾಮಾನ್ಯವಾಗಿ ಬಳಸುತ್ತಿರುವ ಔಷಧಿಗಳ ದರಗಳನ್ನು ಕಡಿಮೆ ಮಾಡುವ ಗುರಿಯೊಂದಿಗೆ ಈ ತೀರ್ಮಾನ ಕೈಗೊಂಡಿದ್ದೇವೆ. ಮತ್ತಷ್ಟು ಹೊಸ ಔಷಧಿಗಳನ್ನೂ ಕೂಡಾ ಡ್ರಗ್ ಪ್ರೈಸ್ ರೆಗ್ಯುಲೇಟರಿ ಅಡಿಯಲ್ಲಿ ತರುತ್ತೇವೆ ಎಂದು ಅಥಾರಿಟಿ ಹೇಳಿದೆ.

English Summary:
National Pharmaceutical Pricing Authority (NPPA) has slashed the prices by 30-50% of 33 essential medicines. The move aims at reducing the prices of commonly used drugs for critical diseases.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache