ಪ್ರವಾಹ ಪೀಡಿತ ಬಿಹಾರಕ್ಕೆ 500 ಕೋಟಿ ನೆರವು ಘೋಷಿಸಿದ ಪ್ರಧಾನಿ – News Mirchi

ಪ್ರವಾಹ ಪೀಡಿತ ಬಿಹಾರಕ್ಕೆ 500 ಕೋಟಿ ನೆರವು ಘೋಷಿಸಿದ ಪ್ರಧಾನಿ

ಪ್ರವಾಹ ಪೀಡಿತ ಬಿಹಾರದಲ್ಲಿ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರವಾಸ ಮಾಡಿ ಪರಿಶೀಲಿಸಿದರು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ಸುಶೀಲ್ ರವರೊಂದಿಗ ಸೇರಿ ಪ್ರಧಾನಮಂತ್ರಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಸಮೀಕ್ಷೆ ನಂತರ ಹಿರಿಯ ಅಧಿಕಾರಿಗಳೊಂದಿಗೆ ಸಮೀಕ್ಷೆ ನಡೆಸಿ, ರಾಜ್ಯಕ್ಕೆ ರೂ.500 ಕೋಟಿ ಪರಿಹಾರ ಪ್ಯಾಕೇಜ್ ಘೋಷಿಸಿದರು. ಪ್ರವಾಹದಿಂದಾದ ನಷ್ಟವನ್ನು ಅಂದಾಜು ಮಾಡಲು ಕೇಂದ್ರ ತಂಡವೊಂದನ್ನು ಕಳುಹಿಸುವುದಾಗಿ ಭರವಸೆ ನೀಡಿದರು.

ಬಿಹಾರ ರಾಜ್ಯವು ಈ ಬಾರಿ ಕಂಡ ಪ್ರವಾಹ ಇತ್ತೀಚಿನ ವರ್ಷಗಳಲ್ಲಿಯೇ ಅತ್ಯಂತ ದೊಡ್ಡ ನಷ್ಟವುಂಟು ಮಾಡಿದ್ದು, ಸುಮಾರು 300 ಜನರು ಇದಕ್ಕೆ ಬಲಿಯಾಗಿದ್ದಾರೆ. ಸುಮಾರು 15 ಜಿಲ್ಲೆಗಳಲ್ಲಿ ಈ ಪ್ರವಾಹ ಪರಿಣಾಮ ಬೀರಿದೆ. ಸುಮಾರು 7 ಲಕ್ಷ ಜನರು ಮನೆ ಬಿಟ್ಟು ಸ್ಥಳಾಂತರವಾಗಿದ್ದರು. ಈಗ ಹಲವು ಪ್ರದೇಶಗಳಲ್ಲಿ ಪ್ರವಾಹದ ನೀರು ಕಡಿಮೆಯಾಗಿದ್ದು, ಜನರು ತಮ್ಮ ತಮ್ಮ ಮನೆಗಳಿಗೆ ವಾಪಸಾಗುತ್ತಿದ್ದಾರೆ. [ಇದನ್ನೂ ಓದಿ: ಶಾಕಿಂಗ್ ಸತ್ಯ: ರಾಮ್ ರಹೀಮ್ ಅತ್ಯಾಚಾರಕ್ಕೆ “ಪಿತಾಜಿ ಮಾಫಿ” ಕೋಡ್ ವರ್ಡ್!]

ಆದರೆ ಮೋದಿಯವರ ವೈಮಾನಿಕ ಸಮೀಕ್ಷೆಗೆ ಆರ್.ಜೆ.ಡಿ ಮುಖ್ಯಸ್ಥ ಲಾಲೂ ಪ್ರಸಾದ್ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರವಾಹ ಕಡಿಮೆಯಾದ ನಂತರ ರಾಜ್ಯದಲ್ಲಿ ಸಮೀಕ್ಷೆ ಕೈಗೊಳ್ಳುವ ಅವಶ್ಯಕತೆಯಾದರೂ ಏನಿತ್ತು ಎಂದು ಅವರು ಪ್ರಶ್ನಿಸಿದ್ದಾರೆ. ಈ ಹಿಂದೆ ರಾಜ್ಯದಲ್ಲಿ ಪ್ರವಾಹ ಸಂಭವಿಸಿದಾಗ ಮೋದಿಯವರಿಗೆ ಇಲ್ಲಿಗೆ ಭೇಟಿ ನೀಡಬೇಕು ಅನ್ನಿಸಲಿಲ್ಲ. ಆಗ ಒಂದು ರೂಪಾಯಿ ನೆರವನ್ನೂ ನೀಡಲಿಲ್ಲ ಎಂದ ಆರೋಪಿಸಿದ್ದಾರೆ. ಬಿಹಾರದಲ್ಲಿ ಪ್ರವಾಹಗಳು ತನ್ನಿಂತಾನೇ ಉಂಟಾಗಿದ್ದಲ್ಲ, ನಿತೀಶ್ ಸರ್ಕಾರದ ಎಂಜಿನಿಯರ್ ಗಳು ಅಣೆಕಟ್ಟುಗಳನ್ನು ತಿರುಗಿಸುವ ಮೂಲಕ ಪ್ರವಾಹಕ್ಕೆ ಕಾರಣರಾಗಿದ್ದಾರೆ ಎಂದು ಲಾಲೂ ಆರೋಪಿಸಿದ್ದಾರೆ.

Contact for any Electrical Works across Bengaluru

Loading...
error: Content is protected !!