ಫಿಫಾ ವರ್ಲ್ಡ್ ಕಪ್ ಮೇಲೆ ಐಸಿಸ್ ಕರಿನೆರಳು..? – News Mirchi

ಫಿಫಾ ವರ್ಲ್ಡ್ ಕಪ್ ಮೇಲೆ ಐಸಿಸ್ ಕರಿನೆರಳು..?

ನವದೆಹಲಿ :  ಮುಂದಿನ ವರ್ಷ ರಷ್ಯಾದಲ್ಲಿ ನಡೆಯುವ 2018ರ ಫಿಫಾ ವರ್ಲ್ಡ್ ಕಪ್ ಮೇಲೆ ಐಸಿಸ್ ಉಗ್ರ ಸಂಘಟನೆ ಕಣ್ಣಿಟ್ಟಿದೆ ಎನ್ನಲಾಗುತ್ತಿದ್ದು, ಆತಂಕದ ವಾತಾವರಣ ನಿರ್ಮಾಣ ಮಾಡಿದೆ ಎನ್ನಲಾಗುತ್ತಿದೆ.

ಐಸಿಸ್ ಉಗ್ರ ಸಂಘಟನೆ ಅರ್ಜೆಂಟಿನಾ ಫುಟ್ಬಾಲ್ ಆಟಗಾರ ಲಯೊನೆಲ ಮೆಸ್ಸಿ ಅವರನ್ನು ಗುರಿಯಾಗಿಸಿಕೊಂಡಿರುವ ಪೋಸ್ಟರ್  ಒಂದನ್ನು ಬಿಡುಗಡೆ ಮಾಡಿದೆ. ಇದನ್ನು ವಾಫಾ ಮೀಡಿಯಾ ಫೌಂಡೇಶನ್ ಬಿಡುಗಡೆ ಮಾಡಿದೆ ಎನ್ನಲಾಗಿದ್ದು, ಜನರಲ್ಲಿ ಬೆದರಿಕೆ ಒಡ್ಡಿದೆ.  ಸೈಟ್ ಇಂಟೆಲಿ ಗ್ರೂಪ್ ಈ ಚಿತ್ರವನ್ನು ಟ್ವೀಟ್ ಮಾಡಿದೆ. ಮೆಸ್ಸಿಯವರನ್ನು ಜೈಲು ಕಂಬಿಗಳ ಹಿಂದೆ ರಕ್ತ ಕಣ್ಣೀರು ಸುರಿಸುತ್ತಿರುವಂತೆ ಚಿತ್ರಿಸಲಾಗಿದೆ. ನೀನು ರಾಜ್ಯಕ್ಕಾಗಿ ಹೋರಾಡಿದಲ್ಲಿ ನಿನ್ನ ಶಬ್ದಕೋಶದಲ್ಲಿ ಸೋಲು ಎಂಬುದೇ ಇರುವುದಿಲ್ಲ ಎಂಬ ಸಂದೇಶವಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

Get Latest updates on WhatsApp. Send ‘Add Me’ to 8550851559

Loading...