ಬಿ.ಎಸ್.ಎಫ್ ಮೀಟಿಂಗ್ ನಲ್ಲಿ ಪೋರ್ನ್ ವೀಡಿಯೋ! – News Mirchi

ಬಿ.ಎಸ್.ಎಫ್ ಮೀಟಿಂಗ್ ನಲ್ಲಿ ಪೋರ್ನ್ ವೀಡಿಯೋ!

ಚಂಡೀಗಢ: ಬಿ.ಎಸ್.ಎಫ್ ಅಧಿಕೃತ ಕಾರ್ಯಕ್ರಮವೊಂದರಲ್ಲಿ ಅಶ್ಲೀಲ ವೀಡಿಯೋ ಒಂದು ಪ್ಲೇ ಆಗಿ ಮುಜುಗರದ ವಾತಾವರಣ ಸೃಷ್ಟಿಯಾದ ಘಟನೆ ನಡೆದಿದೆ. ಪಂಜಾಬ್ ನ ಫಿರೋಜ್ ಪುರದ ಬಾರ್ಡರ್ ಸೆಕ್ಯೂರಿಟಿ ಫೋರ್ಸಸ್ 77 ನೇ ಬೆಟಾಲಿಯನ್ ಹೆಡ್ ಕ್ವಾರ್ಟರ್ಸ್ ನಲ್ಲಿ ದೇಶದ ಭದ್ರತೆಗೆ ಸಂಬಂಧಿಸಿದಂತೆ ಚರ್ಚಿಸಲು ಭಾನುವಾರ ಅಧಿಕಾರಿಗಳು ಆಗಮಿಸಿದ್ದರು. ಮೀಟಿಂಗ್ ಹಾಲ್ ನಲ್ಲಿ ಬಾರ್ಡರ್ ಸಮಸ್ಯೆಗಳ ಕುರಿತು ವಿವರಿಸಲು ಟೇಬಲ್ ಮೇಲೆ ಪ್ರೊಜೆಕ್ಟರ್ ಅನ್ನು ಇರಿಸಲಾಗಿತ್ತು.

ಗಡಿಯನ್ನು ಹೇಗೆ ರಕ್ಷಿಸಬೇಕು ಎಂಬ ವಿಷಯದ ಕುರಿತು ವಿವರಿಸಲು ಡೆಪ್ಯೂಟಿ ಕಮಾಂಡೆಂಟ್ ಒಬ್ಬರು ತಮ್ಮ ಅಧಿಕೃತ ಲ್ಯಾಪ್ ಟಾಪ್ ಮೂಲಕ ಪ್ಲೇ ಮಾಡುತ್ತಿದ್ದಂತೆ ಪ್ರೊಜೆಕ್ಟರ್ ನಲ್ಲಿ ಅನಿರೀಕ್ಷಿತವಾಗಿ ಅಶ್ಲೀಲ ವೀಡಿಯೋ ಪ್ಲೇ ಆಗಿದೆ. ಇದರಿಂದಾಗಿ ಅಲ್ಲಿದ್ದವರಿಗೆಲ್ಲಾ ಶಾಕ್… ಲ್ಯಾಪ್ ಟಾಪ್ ಆಫ್ ಮಾಡುವುದರೊಳಗೆ 90 ಸೆಕೆಂಡುಗಳ ಕಾಲ ಅಶ್ಲೀಲ ವೀಡಿಯೋ ಪ್ಲೇ ಆಗಿದೆ. ಈ ಸಭೆಗೆ ಬಂದವರಲ್ಲಿ 12 ಜನ ಮಹಿಳಾ ಅಧಿಕಾರಿಗಳು ಸೇರಿದಂತೆ 20 ಕ್ಕೂ ಹೆಚ್ಚು ಯೋಧರೂ ಇದ್ದರು.

ಈ ಘಟನೆಗೆ ಕಾರಣ ತಿಳಿಯಲು ಉನ್ನತ ಮಟ್ಟದ ತನಿಖೆಗೆ ಬಿ.ಎಸ್.ಎಫ್ ಇನ್ಸ್ ಪೆಕ್ಟರ್ ಜನರಲ್ ಮುಕುಲ್ ಗೋಯಲ್ ಆದೇಶಿಸಿರುವುದಾಗಿ ಬಿ.ಎಸ್.ಎಫ್ ಅಧಿಕೃತ ವಕ್ತಾರರೊಬ್ಬರು ಹೇಳಿದ್ದಾರೆ. ಈ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

 

Loading...