ಪಾಕ್ ಪರ ಘೋಷಣೆ: ದೇಶದ್ರೋಹ ಆರೋಪದಿಂದ ನಮ್ಮ ಜೀವನ ಹಾಳಾಗುತ್ತೆ ಎಂದ ಬಂಧಿತರು

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಸೋತ ಸಂದರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿ ಸಂಭ್ರಮಿಸಿದ 15 ಯುವಕರನ್ನು ಮಧ್ಯಪ್ರದೇಶದಲ್ಲಿ ಮಂಗಳವಾರ ಬಂಧಿಸಲಾಗಿತ್ತು. ಆದರೆ ಬಂಧಿತ ಯುವಕರ ಕುಟುಂಬಗಳು ಮಾತ್ರ ಇದು ತಮ್ಮವರ ವಿರುದ್ಧದ ಪಿತೂರಿಯಾಗಿದೆ ಎಂದು ಆರೋಪಿಸಿದ್ದಾರೆ.

ಬಂಧಿತರ ಮೇಲಿನ 15 ವ್ಯಕ್ತಿಗಳ ಜೀವನ ನಾಶವಾಗುತ್ತದೆ. ಇದೊಂದು ನಮ್ಮ ವಿರುದ್ಧದ ಪಿತೂರಿಯಾಗಿದೆ. ದೇಶದ್ರೋಹದ ಆರೋಪ ನಮ್ಮ ಬದುಕುಗಳನ್ನು ನಾಶ ಮಾಡುತ್ತದೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.

ಭಾರತದ ವಿರುದ್ಧ ಪಾಕಿಸ್ಥಾನ ಗೆಲ್ಲುತ್ತಿದ್ದಂತೆ ಮೊಹಾದ್ ಎಂಬ ಹಳ್ಳಿಯಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರೆಂಬ ದೂರಿನ ಹಿನ್ನೆಲೆಯಲ್ಲಿ ಪೊಲೀಸರು 15 ಜನರನ್ನು ಬಂಧಿಸಿದ್ದರು. ನಾವು ಘಟನೆಗೆ ಸಂಬಂಧಿಸಿದಂತೆ ಹಳ್ಳಿಯ ನಿವಾಸಿಯೊಬ್ಬರಿಂದ ದೂರು ಸ್ವೀಕರಿಸಿದ್ದು, ನಮ್ಮ ಪ್ರಾಥಮಿಕ ತನಿಖೆಯಲ್ಲಿ ಆರೋಪ ಸತ್ಯವೆಂದು ಸಾಬೀತಾಗಿದೆ ಎಂದು ಶಾಹ್ಪುರ ಠಾಣೆ ಇನ್ಚಾರ್ಜ್ ಸಂಜಯ್ ಪಾಠಕ್ ಹೇಳಿದ್ದಾರೆ.

ಆದರೆ ನಾವು ಬಿಜೆಪಿ ಮತ ಹಾಕಿಲ್ಲವೆಂಬ ಕಾರಣಕ್ಕೆ ನಮ್ಮವರ ವಿರುದ್ಧ ದೇಶದ್ರೋಹ ಆರೋಪ ಹೊರಿಸಿದ್ದಾರೆ. ಇದರ ಹಿಂದೆ ಪಿತೂರಿ ಅಡಗಿದೆ, ನಮ್ಮವರು ಯಾವುದೇ ಸಂಭ್ರಮಾಚರಣೆ ಮಾಡುತ್ತಿರಲಿಲ್ಲ ಎಂದು ಬಂಧಿತರ ಕುಟುಂಬಗಳು ಹೊಸ ಕಥೆ ಕಟ್ಟುತ್ತಿವೆ.