ವೇಶ್ಯಾವಾಟಿಕೆ ನಡೆಸುತ್ತಿದ್ದ ಡಾಬಾ ಮೇಲೆ ಮಂಡ್ಯ ಎಸ್ಪಿ ನೇತೃತ್ವದಲ್ಲಿ ದಾಳಿ, 22 ಜನರ ಬಂಧನ |News Mirchi

ವೇಶ್ಯಾವಾಟಿಕೆ ನಡೆಸುತ್ತಿದ್ದ ಡಾಬಾ ಮೇಲೆ ಮಂಡ್ಯ ಎಸ್ಪಿ ನೇತೃತ್ವದಲ್ಲಿ ದಾಳಿ, 22 ಜನರ ಬಂಧನ

ಮಂಡ್ಯ: ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿರುವ ನಗುವನಹಳ್ಳಿ ಗೇಟ್ ಬಳಿಯ ಡಾಬಾವೊಂದರ ಮೇಲೆ ಶನಿವಾರ ತಡರಾತ್ರಿ ದಾಳಿ ನಡೆಸಿರುವ ಮಂಡ್ಯ ಎಸ್ಪಿ ರಾಧಿಕಾ ನೇತೃತ್ವದ ಪೊಲೀಸರ ತಂಡ, ವೇಶ್ಯಾವಾಟಿಕೆ ದಂಧೆಗೆ ಸಂಬಂಧಿಸಿದಂತೆ 22 ಜನರನ್ನು ಬಂಧಿಸಿದೆ. ಕೋಲ್ಕತಾ ಮೂಲಕ 8 ಮಹಿಳೆಯರನ್ನು ಈ ದಂಧೆಯಿಂದ ರಕ್ಷಿಸಲಾಗಿದೆ.

ದಾಳಿ ವೇಳೆ ಮಹಿಳೆಯರನ್ನು ಬಚ್ಚಿಡಲೆಂದೇ ಡಾಬಾದ ನೆಲ ಮಾಳಿಗೆಯಲ್ಲಿ ನಿರ್ಮಿಸಿದ್ದ 6 ಅಡಿ ಅಳತೆಯ ಸುರಂಗಗಳು ಪತ್ತೆಯಾಗಿವೆ. ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಎಸ್ಪಿ ರಾಧಿಕಾ ಅವರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಪ್ರವಾಸಿಗರಿಗೆ ಗಾಳ ಹಾಕಿ ಇಲ್ಲಿಗೆ ಕರೆತರಲೆಂದೇ ಮೂವರನ್ನು ನೇಮಕ ಮಾಡಿದ್ದರು ಎನ್ನಲಾಗಿದೆ.

ಹೆಚ್ಚಿನ ವಿವರಗಳ ಬಗ್ಗೆ ವಿಚಾರಣೆ ನಡೆಯುತ್ತಿದ್ದು, ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಹೇಳಿದ್ದಾರೆ. ಈ ಡಾಬಾ ಮೇಲೆ ದಾಳಿ ನಡೆದಿರುವುದು ಇದೇ ಮೊದಲಲ್ಲ. ಹತ್ತು ವರ್ಷಗಳ ಹಿಂದೆಯೂ ವೇಶ್ಯಾವಾಟಿಕೆ ನಡೆಸುತ್ತಿದ್ದ ಶಂಕೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದರು.

Loading...
loading...
error: Content is protected !!