ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಏಕಸ್ ಕಂಪನಿ ಎದುರು ಕಾರ್ಮಿಕರ ಧರಣಿ – News Mirchi

ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಏಕಸ್ ಕಂಪನಿ ಎದುರು ಕಾರ್ಮಿಕರ ಧರಣಿ

ಬೆಳಗಾವಿ: 13 ಖಾಯಂ ಉದ್ಯೋಗಿಗಳು ಮತ್ತು ಇಬ್ಬರು ಜನ ಟ್ರೈನೀ ಕಾರ್ಮಿಕರ ವಜಾ ಅದೇಶವನ್ನು ರದ್ದು ಮಾಡಬೇಕು, 195 ಕಾರ್ಮಿಕರ ಮೇಲಿನ ಕ್ರಿಮಿನಲ್ ಪ್ರಕರಣ ಹಿಂದಕ್ಕೆ ಪಡೆಯಲು ಒತ್ತಾಯಿಸಿ ಇಂದು ಏಕಸ್ ಕಂಪನಿಯ ಎದುರು ಅನಿರ್ಧಿಷ್ಟ ಧರಣಿ ನಡೆಯಿತು.

ಕಂಪನಿಯಲ್ಲಿ ಕಾರ್ಮಿಕರಿಗೆ ಮಾನಸಿಕ ಕಿರುಕುಳ ತಪ್ಪಿಸಿ ಶಾಂತಿ ಸೌಹಾರ್ದತೆ ಸ್ಥಾಪಿಸಿ 300 ಕ್ಕೂ ಹೆಚ್ಚಿನ ಹೊರಗಿರುವ ಕಾರ್ಮಿಕರಿಗೆ ಕೆಲಸ ಒದಗಿಸಬೇಕು, 45 ಜನ ಕಾರ್ಮಿಕರಿಗೆ ಮೊದಲಿನಂತೆ ಕ್ವಾಲಿಟಿ ವಿಭಾಗದಲ್ಲಿ ಕೆಲಸಕ್ಕೆ ನೇಮಿಸಬೇಕು, ಕಾರ್ಮಿಕರ ಸಂಘದೊಂದಿಗೆ ಸಂಸ್ಥೆಯು ಮಾತುಕತೆಗೆ ಬರಬೇಕು ಎಂದು ಧರಣಿಯಲ್ಲಿ ಒತ್ತಾಯಿಸಲಾಯಿತು.

ಧರಣಿಯನ್ನು ಉದ್ದೇಶಿಸಿ ರಾಮಕರಣ ಕೆಕೆಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಭೀಮರಾವ್ ಕಾರ್ಯದರ್ಶಿ ಕೆಕೆಯು, ಕೆ.ಬಿ.ಗೋನಾಳ ರಾಜ್ಯ ಕಾರ್ಯದರ್ಶಿ ಟಿಯುಸಿಐ, ಮಾರುತಿ ಢಗೆಣ್ಣನವರು ಜಿಲ್ಲಾ ಅಧ್ಯಕ್ಷರು ಟಿಯುಸಿಐ, ಮಾಡ್ಡಪ್ಪ ಕೊಂಡಗೂಳಿ, ಸಂಜೀವ ಪಾಟೀಲ್ ಕೆಕೆಯು ಮುಂತಾದವರು ಮಾತನಾಡಿದರು.

ಧರಣಿಯಲ್ಲಿ ಮೋಹನ್, ಲಕ್ಷ್ಮಿ ಸಾಯೆಬಣ್ಣವರ್, ಶೈಲೇಂದ್ರ, ನಿಜಗುಣ, ರಾಜೇಂದ್ರ, ರವೀಂದ್ರ ದೇಸಾಯಿ ಮತ್ತು 300ಕ್ಕೂ ಹೆಚ್ಚು ಕಾರ್ಮಿಕರು ಪಾಲ್ಗೊಂಡಿದ್ದು ಸರಕಾರ ಮತ್ತು ಕಂಪನಿ ವಿರುದ್ಧ ಘೋಷಣೆಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

Loading...

Leave a Reply

Your email address will not be published.