ನಾಳೆ ಪಿಎಸ್ಎಲ್‌ವಿ ಸಿ-36 ಪ್ರಯೋಗ

ಶ್ರೀಹರಿಕೊಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ(ಶಾರ್) ದಿಂದ ಬುಧವಾರ ಬೆಳಗ್ಗೆ 10:25 ಕ್ಕೆ ಪಿಎಸ್ಎಲ್‌ವಿ ಸಿ-36 ರಾಕೆಟ್ ಆಗಸಕ್ಕೆ ಹಾರಲಿದೆ. ಈ ಪರೀಕ್ಷೆಗೆ ಸಂಬಂಧಿಸಿದಂತೆ ಕೌಂಟ್ ಡೌನ್ 36 ಗಂಟೆಗಳ ಮೊದಲೇ ಅಂದರೆ ಸೋಮವಾರ ರಾತ್ರಿ 10:25 ಕ್ಕೆ ಆರಂಭವಾಗಿದೆ. ಇದಕ್ಕೆ ಸಂಬಂಧಿಸಿದ ಅಂತಿಮ ಎಂಆರ್‌ಆರ್ ಸಭೆ ಸೋಮವಾರ ಶಾರ್ ನಲ್ಲಿ ಡಾ. ಬಿ.ಎನ್.ಸುರೇಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ವಿಜ್ಞಾನಿಗಳು ಪರೀಕ್ಷೆಯ ಕುರಿತು ಸುದೀರ್ಘ ಚರ್ಚೆ ನಡೆಸಿದರು.

ನಂತರ ಶಾರ್ ಡೈರೆಕ್ಟರ್ ಅಧ್ಯಕ್ಷತೆಯಲ್ಲಿ ಲಾಂಚಿಂಗ್ ಆಥರೈಸೇಷನ್ ಬೋರ್ಡ್ ಪ್ರಯೋಗಕ್ಕೆ ಹಸಿರು ನಿಶಾನೆ ತೋರಿತು.

ಈ ರಾಕೆಟ್ ಮೂಲಕ 1235 ಕೆಜಿ ತೂಕದ ರೀಸೋರ್ಸ್ ಸ್ಯಾಟ್-2ಎ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದ್ದಾರೆ.ಬುಧವಾರ ಬೆಳಗ್ಗೆ 10:25 ಕ್ಕೆ ಈ ರಾಕೆಟ್ ಉಡಾವಣೆಯಾಗಲಿದೆ. ಇದುವರೆಗೂ ಒಟ್ಟು 37 ಪಿಎಸ್‌ಎಲ್‌ವಿ ಪರೀಕ್ಷೆಗಳು ನಡೆದಿದ್ದು, ಮೊದಲನೆಯದು ಹೊರತುಪಡಿಸಿ ಉಳಿದೆಲ್ಲಾ ಪ್ರಯೋಗಗಳು ಯಸಸ್ವಿಯಾಗಿವೆ. ಇದುವರೆಗೂ ಒಟ್ಟು 121 ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸಲಾಗಿದೆ. ಇದರಲ್ಲಿ 79 ವಿದೇಶಿ ಉಪಗ್ರಹಗಳು ಸೇರಿದ್ದು, 42 ಉಪಗ್ರಹಗಳು ಭಾರತದ್ದು.

The Indian Space Research Organisation (ISRO) is all set to launch the PSLV-C36 mission from the spaceport of Sriharikota. The PSLV-C36 satellite will be carrying remote sensing services of the satellite RESOURCESAT-2A. These satellites launch from the First launch Pad at the Satish Dhawan Space Centre SHAR, Sriharikota on 7th of December.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache