ಪಿಎಸ್ಎಲ್‌ವಿ ಸಿ-36 ಪ್ರಯೋಗ ಯಶಸ್ವಿ

ಶ್ರಿಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ ವಿಜ್ಞಾನಿಗಳು ನಡೆಸಿದ ಪಿಎಸ್ಎಲ್‌ವಿ ಸಿ-36 ಪ್ರಯೋಗ ಯಶಸ್ವಿಯಾಗಿದೆ. ಬುಧವಾರ ಬೆಳಗ್ಗೆ ರಿಸೋರ್ಸ್ ಸ್ಯಾಟ್-2ಎ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಯಿತು.

ಸೊಮವಾರವೇ ರಾಕೆಟ್ ಉಡಾವಣೆಗೆ ಕೌಂಟ್ ಡೌನ್ ಆರಂಭವಾಗಿತ್ತು. ಬುಧವಾರ ಕೌಂಟ್ ಡೌನ್ ಪೂರ್ತಿಯಾಗುತ್ತಿದ್ದಂತೆ ರಿಸೋರ್ಸ್ ಸ್ಯಾಟ್-2ಎ ಉಪ ಗ್ರಹವನ್ನು ಹೊತ್ತ ಪಿಎಸ್ಎಲ್‌ವಿ ಸಿ-36 ಆಗಸಕ್ಕೆ ಹಾರಿತು.

ರಾಕೆಟ್ ನಿಂದ ಬೇರ್ಪಟ್ಟ ಉಪಗ್ರಹ ಯಶಸ್ವಿಯಾಗಿ ನಿಗದಿತ ಕಕ್ಷೆಗೆ ತಲುಪಿತು ಎಂದು ಇಸ್ರೋ ವಿಜ್ಞಾನಿಗಳು ಘೊಷಿಸಿದರು.

ರಿಸೋರ್ಸ್ ಸ್ಯಾಟ್- ಎ2 ಉಪಗ್ರಹ 1,235 ಕೆಜಿ ತೂಕ ಹೊಂದಿದೆ. ಜಲ ಸಂಪನ್ಮೂಲ, ನಗರ ಯೋಜನೆ, ಕೃಷಿ ಮತ್ತು ರಕ್ಷಣಾ ಕ್ಷೇತ್ರಗಳಿಗೆ ಈ ಉಪಗ್ರಹ ಪ್ರಯೋಗದ ಮೂಲಕ ಅನುಕೂಲವಾಗಲಿದೆ.