ಹಾಸ್ಟೆಲಿನ ಶೌಚಾಲಯದಲ್ಲಿ ಶವವಾಗಿ ಪತ್ತೆಯಾದ ವಿದ್ಯಾರ್ಥಿ – News Mirchi

ಹಾಸ್ಟೆಲಿನ ಶೌಚಾಲಯದಲ್ಲಿ ಶವವಾಗಿ ಪತ್ತೆಯಾದ ವಿದ್ಯಾರ್ಥಿ

ಬೆಂಗಳೂರು: ಧಾರವಾಡ ಮೂಲದ ವಿದ್ಯಾರ್ಥಿಯೊಬ್ಬ ನಗರದ ಕಾಲೇಜು ಹಾಸ್ಟೆಲಿನ ಶೌಚಾಲಯದಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಧಾರವಾಡದ ಸಾರ್ಥಕ್ ಪುರಾಣಿಕ್(17) ಮೃತ ವಿದ್ಯಾರ್ಥಿಯಾಗಿದ್ದು, ಎರಡು ವರ್ಷಗಳಿಂದ ಚೈತನ್ಯ ಇ-ಟೆಕ್ನೋ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಾಲೇಜಿನ ಹಾಸ್ಟೆಲಿನಲ್ಲಿಯೇ ಉಳಿದುಕೊಂಡಿದ್ದ.

ಶನಿವಾರ 7:30 ರಲ್ಲಿ ಈ ಘಟನೆ ನಡೆದಿದ್ದು, ಎಷ್ಟು ಹೊತ್ತಾದರೂ ಶೌಚಾಲಯದಿಂದ ಸಾರ್ಥಕ್ ಹೊರಬಾರದಿದ್ದರಿಂದ ಅನುಮಾನಗೊಂಡ ಇತರೆ ವಿದ್ಯಾರ್ಥಿಗಳು ಕಿಟಕಿಯಿಂದ ನೋಡಿದಾಗ ಸಾರ್ಥಕ್ ಕುಸಿದು ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಭದ್ರತಾ ಸಿಬ್ಬಂದಿಗೆ ವಿಷಯ ತಿಳಿಸಿದ್ದು, ಬಾಗಿಲು ಒಡೆದು ಪುರಾಣಿಕ್ ನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅದಾಗಲೇ ಸಾರ್ಥಕ್ ಪುರಾಣಿಕ್ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದರು. ಸಾರ್ಥಕ್ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಹೇಳಿರುವ ಪೊಲೀಸರು, ಮರಣೋತ್ತರ ಪರೀಕ್ಷೆ ವರದಿಗಾಗಿ ನಿರೀಕ್ಷಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

Get Latest updates on WhatsApp. Send ‘Add Me’ to 8550851559

Loading...