ಪಂಜಾಬ್ ನಲ್ಲಿ ಕೃಷಿ ಸಾಲ ಮನ್ನಾ – News Mirchi

ಪಂಜಾಬ್ ನಲ್ಲಿ ಕೃಷಿ ಸಾಲ ಮನ್ನಾ

ಬಿಜೆಪಿ ಆಡಳಿತದ ಉತ್ತರಪ್ರದೇಶ ಮತ್ತು ಮಹಾರಾಷ್ಟ್ರ ಸರ್ಕಾರಗಳು ಕೃಷಿ ಸಾಲ ಮನ್ನಾ ಘೋಷಣೆ ಮಾಡಿದ ಬಳಿಕ, ಇದೀಗ ಕಾಂಗ್ರೆಸ್ ಆಡಳಿತ ಪಂಜಾಬ್ ಸರದಿ. ಗರಿಷ್ಠ 5 ಎಕರೆವರೆಗೂ ಭೂಮಿಯಿರುವ ಎಲ್ಲಾ ಸಣ್ಣ ಮತ್ತು ಅತಿ ಸಣ್ಣ ರೈತರ ರೂ. 2 ಲಕ್ಷದವರೆಗಿನ ಕೃಷಿ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡುವುದಾಗಿ  ಅಮರೀಂದರ್ ಸಿಂಗ್ ಸರ್ಕಾರ ಹೇಳಿದೆ.

ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳ ಸಾಲ ಮನ್ನಾ ಮಾಡುವ ಜೊತೆಗೆ ಅವರಿಗೆ ನೀಡುವ ನಷ್ಟ ಪರಿಹಾರವನ್ನು ರೂ. 3 ಲಕ್ಷದಿಂದ 5 ಲಕ್ಷಕ್ಕೆ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಏರಿಕೆ ಮಾಡಿದ್ದಾರೆ. ಪಂಜಾಬ್ ರಾಜ್ಯದಲ್ಲಿ 18 ಲಕ್ಷ ರೈತರಿದ್ದು, ಸರ್ಕಾರದ ಈ ಕ್ರಮದಿಂದ 10 ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲವಾಗಲಿದೆ.

ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಹೋಲಿಸಿದರೆ, ಪಂಜಾಬ್ ಸರ್ಕಾರ ರೈತರಿಗೆ ಎರಡರಷ್ಟು ಪರಿಹಾರವನ್ನು ಘೋಷಿಸಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ರೂ.36,359 ಕೋಟಿ ಮೌಲ್ಯದ ಕೃಷಿ ಸಾಲ ಮನ್ನಾ ಮಾಡುವುದಾಗಿ ಘೋಷಿಸಿತ್ತು. ಇದೇ ಜೂನ್ 11 ರಂದು ಮಹಾರಾಷ್ಟ್ರ ಸರ್ಕಾರವೂ ಇದೇ ಹಾದಿಯಲ್ಲಿ ಸಾಗಿದ್ದು, ರೂ. 30 ಸಾವಿರ ಕೋಟಿ ಮೌಲ್ಯದ ಸಣ್ಣ ಮತ್ತು ಅತಿ ಸಣ್ಣ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿತ್ತು.

ಇನ್ನು ಕರ್ನಾಟಕ, ಹರಿಯಾಣ, ತಮಿಳುನಾಡು, ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿಯೂ ಸಾಲ ಮನ್ನಾಕ್ಕಾಗಿ ಒತ್ತಾಯಗಳು ಕೇಳಿಬರುತ್ತಿವೆ.

Contact for any Electrical Works across Bengaluru

Loading...
error: Content is protected !!