ಕೊರಿಯಾ ಓಪೆನ್ ಸಿರೀಸ್ : ಪಿ.ವಿ.ಸಿಂಧುಗೆ ಪ್ರತೀಕಾರದ ಗೆಲುವು

ಕೊರಿಯಾ ಓಪೆನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ನಲ್ಲಿ ಮಹಿಳೆಯರ ಸಿಂಗಲ್ಸ್ ನಲ್ಲಿ ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ವಿಜೇತರಾಗಿದ್ದಾರೆ.

ಭಾನುವಾರ ನಡೆದ ಫೈನಲ್ ನಲ್ಲಿ ಪಿ.ವಿ.ಸಿಂಧು 22-20, 11-21, 21-18 ಅಂತರದಿಂದ ಜಪಾನ್ ಆಟಗಾರ್ತಿ ಒಕುಹಾರಾ ವಿರುದ್ಧ ಗೆಲುವು ಸಾಧಿಸಿ ಕೊರಿಯಾ ಸೂಪರ್ ಸಿರೀಸ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಸಿಂಧು ಈ ಸರಣಿಯಲ್ಲಿ ಗೆಲುವು ಕಂಡಂತಾಗಿದೆ.

ಇಬ್ಬರು ಆಟಗಾರ್ತಿಯರ ನಡುವೆ ನಾನಾ ನೀನಾ ಎಂಬಂತೆ ನಡೆದ ಪಂದ್ಯದಲ್ಲಿ ಅಂತಿಮ ಸುತ್ತಿನಲ್ಲಿ ಗೆಲುವು ಸಿಂಧು ಕಡೆ ವಾಲಿತು. ವಿಶ್ವ ಬ್ಯಾಂಡ್ಮಿಂಟನ್ ಚಾಂಪಿಯನ್ಷಿಪ್ ನ ಫೈನಲ್ ನಲ್ಲಿ ಒಕುಹಾರಾ ವಿರುದ್ಧ ಎದುರಾದ ಸೋಲಿಗೆ ಸೇಡು ತೀರಿಸಿಕೊಂಡಂತಾಗಿದೆ.

Get Latest updates on WhatsApp. Send ‘Add Me’ to 8550851559