ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್: ಫೈನಲ್ ತಲುಪಿದ ಮೊದಲ ಭಾರತೀಯ ಆಟಗಾರ್ತಿ ಸಿಂಧು |News Mirchi

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್: ಫೈನಲ್ ತಲುಪಿದ ಮೊದಲ ಭಾರತೀಯ ಆಟಗಾರ್ತಿ ಸಿಂಧು

ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಮತ್ತೊಂದು ಮೈಲುಗಲ್ಲು ಸಾಧಿಸಿದ್ದಾರೆ. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿಗೆ ಫೈನಲ್ ತಲುಪಿದ್ದಾರೆ. ಇದುವರೆಗೂ ಭಾರತದಿಂದ ಯಾವುದೇ ಆಟಗಾರರು ಒಲಂಪಿಕ್ಸ್ ಅಥವಾ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ನಲ್ಲಿ ಫೈನಲ್ ಪ್ರವೇಶಿಸಿರಲಿಲ್ಲ. ಈಗ ಆ ಸಾಧನೆಯನ್ನು ಸಿಂಧೂ ಮಾಡಿದ್ದಾರೆ. ಸ್ಕಾಟ್ಲೆಂಡ್ ನಲ್ಲಿನ ಗ್ಲ್ಯಾಸ್ಗೋದಲ್ಲಿ ಶನಿವಾರ ರಾತ್ರಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಚೀನೀ ಜೂನಿಯರ್ ಚಾಂಪಿಯನ್ ಚೆನ್ ಯುಫೀ ಅವರನ್ನು 21-13, 21-10 ಅಂತರದಿಂದ ಸೋಲಿಸಿ ಫೈನಲ್ ಗೆ ಅರ್ಹತೆ ಗಿಟ್ಟಿಸಿದ್ದಾರೆ.

ಪಂದ್ಯ ಆರಂಭವಾದ 48 ನಿಮಿಷಗಳಲ್ಲಿಯೇ ಸಿಂಧು ಆಟ ಮುಗಿಸಿದ್ದು ವಿಶೇಷ. ಭಾನುವಾರ ಸಂಜೆ ನಡೆಯುವ ಫೈನಲ್ ಪಂದ್ಯದಲ್ಲಿ ಜಪಾನಿನ ಒಕುಹಾರಾ ಅವರನನ್ನು ಸಿಂಧು ಎದುರಿಸಲಿದ್ದಾರೆ. ಜಪಾನಿನ ಒಕುಹಾರಾ ಭಾರತದ ಮತ್ತೊಬ್ಬ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರನ್ನು ಮೊದಲ ಸೆಮಿಫೈನಲ್ ನಲ್ಲಿ ಸೋಲಿಸಿ ಫೈನಲ್ ತಲುಪಿದ್ದಾರೆ. ಹೀಗಾಗಿ ಸೈನಾ ನೆಹ್ವಾಲ್ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಪಿ.ವಿ. ಸಿಂಧು ವಿಶ್ವ ಚಾಂಪಿಯನ್ಶಿಪ್ನಲ್ಲಿ ಈ ಹಿಂದೆ 2013 ಮತ್ತು 2014 ರಲ್ಲಿ ಕಂಚಿನ ಪದಕಗಳನ್ನು ಗಳಿಸಿದ್ದಾರೆ. ಈ ಭಾರಿ ಚಿನ್ನದ ಪದಕಕ್ಕೆ ಹೋರಾಟ ನಡೆಯಲಿದೆ.

Loading...
loading...
error: Content is protected !!