ಮೃತ ಅನಿಲ್ ನಿವಾಸಕ್ಕೆ ಆರ್.ಅಶೋಕ್ ಭೇಟಿ

ಬೆಂಗಳೂರು: ಮಾಸ್ತಿಗುಡಿ ಚಿತ್ರದ ಕ್ಲೈಮಾಕ್ಸ್ ಚಿತ್ರೀಕರಣ ವೇಳೆ ನಡೆದ ದುರಂತದಲ್ಲಿ ಜಲಸಮಾಧಿಯಾದ ನಟ ಅನಿಲ್ ನಿವಾಸಕ್ಕೆ ಆರ್.ಅಶೋಕ್ ಭೇಟಿ ನೀಡಿ ಮೃತ ನಟನ ಕುಟುಂಬಕ್ಕೆ ಸಾಂತ್ವನ ಹೇಳಿದರು. ನಂತರ ಮಾತನಾಡಿದ ಅವರು ಅಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡುವ ಮುನ್ನ ಬಿಡಬ್ಲ್ಯೂಎಸ್‌ಎಸ್ ಯೋಚಿಸಿ ಅನುಮತಿ ನೀಡಬೇಕಿತ್ತು. ಕಳೆದ 15 ವರ್ಷಗಳಿಂದ ಆ ಕೆರೆಯ ನೀರನ್ನು ಯಾರೂ ಬಳಸುತ್ತಿರಲಿಲ್ಲ, ಅನುಮತಿ ನೀಡಿದ ಬಿಡಬ್ಲ್ಯೂಎಸ್‌ಎಸ್ ಕಡೆಯಿಂದ ಅಲ್ಲಿಗೆ ಯಾರನ್ನಾದರೂ ಕಳುಹಿಸಬೇಕಿತ್ತು ಎಂದರು.

ಮೃತದೇಹಗಳ ಪತ್ತೆಗೆ ಕಾರವಾರದಿಂದ ನುರಿತ ತಜ್ಞರ ತಂಡ ಆಗಮಿಸುತ್ತಿದ್ದು ಶೀಘ್ರವೇ ಅವರ ಮೃತದೇಹಗಳನ್ನು ಪತ್ತೆ ಹಚ್ಚಲಿದ್ದಾರೆ ಎಂದರು. ಮುಂದೆ ಇಂತಹ ಅವಘಡಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.