ಮನೆಗಿಂತ ಜೈಲೇ ವಾಸಿ ಎನ್ನುವ ಭಾವನೆ ಬಂದರೂ ಅಚ್ಚರಿ ಬೇಡ: ಅಶೋಕ್

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರಗಳ ಕುರಿತು ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಿಂದ ತನಿಖೆಯಾಗಲಿ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಅಧಿಕಾರಿಗಳ ಕುಮ್ಮಕ್ಕಿನಿಂದಲೇ ಜೈಲಿನಲ್ಲಿನ ಖೈದಿಗಳಿಗೆ ಮದ್ಯ, ಡ್ರಗ್ಸ್, ಮನೆ ಊಟ ಮತ್ತಿತರ ವಿಶೇಷ ಸವಲತ್ತುಗಳು ಸಿಗಲು ಸಾಧ್ಯ ಎಂದ ಅವರು, ಈ ಅಕ್ರಮಗಳಿಗೆ ಕಡಿವಾಣ ಹಾಕಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮನೆಗಳಿಗಿಂತ ಜೈಲೇ ಸುರಕ್ಷಿತ ಎಂಬ ಭಾವನೆ ಬಂದರೂ ಅಚ್ಚರಿಪಡಬೇಕಿಲ್ಲ ಎಂದು ಹೇಳಿದರು.

ಒಂದೇ ದಿನದಲ್ಲಿ 1 ಲಕ್ಷ ಮೊಬೈಲ್ ಮಾರಾಟ… ಯಾವುದಿದು?

ಮಾಧ್ಯಮಗಳ ಮುಂದೆ ಇಲಾಖೆಯಲ್ಲಿನ ವಿಷಯಗಳು ಬಹಿರಂಗವಾಗುತ್ತಿವೆ ಎಂದರೆ, ಅದಕ್ಕೆ ಅಧಿಕಾರಿಗಳಲ್ಲಿ ಹೊಂದಾಣಿಕೆ ಇಲ್ಲದಿರುವುದೇ ಕಾರಣ. ಈಗ ಜೈಲು ಅಧಿಕಾರಿಗಳ ಮೇಲೆ ಬಂದಿರುವ ಆರೋಪಗಳು ಗೃಹ ಇಲಾಖೆ ತಲುಪಿರುವ ಸ್ಥಿತಿ ಎಂತದ್ದು ಎಂದು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಲೆಕ್ಷನ್ ಗೆ ನಿಂತಿರುವುದು ಪ್ರತಿಭಾ ಹಂತಕ!

ನಿಷ್ಠಾವಂತ ಆದಿಕಾರಿಗಳಿಗೆ ಕಿರುಕುಳ ನೀಡುವುದು ಅಥವಾ ವರ್ಗಾವಣೆ ಮಾಡುವುದು ಸಾಮಾನ್ಯವಾಗಿ ಹೋಗಿದೆ. ಡಿ.ಕೆ.ರವಿ, ಎಂ.ಕೆ ಗಣಪತಿಯಂತಹ ಅಧಿಕಾರಿಗಳ ಆತ್ಮಹತ್ಯೆ ಪ್ರಕರಣಗಳ ನಂತರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದು ಅಶೋಕ್ ಆರೋಪಿಸಿದ್ದಾರೆ.