ಐಕಿಡೋ’ದಲ್ಲಿ ಬ್ಲಾಕ್ ಬೆಲ್ಟ್, ಫೋಟೋ ಬಿಡುಗಡೆಗೊಳಿಸಿದ ರಾಹುಲ್ – News Mirchi

ಐಕಿಡೋ’ದಲ್ಲಿ ಬ್ಲಾಕ್ ಬೆಲ್ಟ್, ಫೋಟೋ ಬಿಡುಗಡೆಗೊಳಿಸಿದ ರಾಹುಲ್

ನವದೆಹಲಿ: ತಾನು ಕ್ರೀಡಾಭಿಮಾನಿಯಾಗಿದ್ದು, ಓಟ, ಈಜುವುದು, ಜಿಮ್ ನಲ್ಲಿ ಕಸರತ್ತು ಮಾಡುವುದಲ್ಲದೆ, ಜಪಾನಿನ ಮಾರ್ಷಿಯಲ್ ಆರ್ಟ್ ‘ಐಕಿಡೋ’ದಲ್ಲಿ ಬ್ಲಾಕ್ ಬೆಲ್ಟ್ ಹೊಂದಿದ್ದೇನೆ. ಆದರೆ ಈ ಕುರಿತು ಸಾರ್ವಜನಿಕವಾಗಿ ಹೇಳಿಕೊಳ್ಳುವುದಿಲ್ಲ. ಕ್ರೀಡಿ ಹಿಂದೆ, ಇಂದು ಮತ್ತು ಮುಂದೆಯೂ ನನ್ನ ಜೀವನದ ಭಾಗ ಎಂದು ಇತ್ತೀಚೆಗೆಷ್ಟೇ ಹೇಳಿದ್ದರು. ಇದೀಗ ಐಕಿಡೋ ಗೆ ಸಂಬಂಧಿಸಿದ ಕೆಲವು ಫೋಟೋಗಳನ್ನು ಅವರು ಬಿಡುಗಡೆ ಮಾಡಿದ್ದಾರೆ.

ತಮ್ಮ ಜೀವನದಲ್ಲಿ ಕ್ರೀಡೆಗಳ ಮಹತ್ವವೇನು ಎಂದು ಪಿಹೆಚ್ಡಿ ಚೇಂಬರ್ ಆಫ್ ಕಾಮರ್ಸ್ ವಾರ್ಷಿಕ ಸಭೆಯಲ್ಲಿ ಬಾಕ್ಸರ್ ವಿಜೆಂದರ್ ಸಿಂಗ್ ಅವರು ಪ್ರಶ್ನಿಸಿದಾಗ ರಾಹುಲ್ ಇದನ್ನು ಬಹಿರಂಗಪಡಿಸಿದ್ದರು. ಇದಕ್ಕೆ ಸಂಬಂಧಿಸಿದ ವೀಡಿಯೋ ಅಥವಾ ಫೋಟೋವನ್ನು ವಿಜೇಂದರ್ ಅವರೊಂದಿಗೆ ಹಂಚಿಕೊಳ್ಳುವುವದಾಗಿ ಆಗ ರಾಹುಲ್ ಗಾಂಧಿ ಭರವಸೆ ನಿಡಿದ್ದರು.

ಇದೀಗ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಖಾತೆಯಿಂದ ರಾಹುಲ್ ‘ಐಕಿಡೊ’ ಅಭ್ಯಾಸ ಮಾಡುತ್ತಿರುವ ಫೋಟೋವನ್ನು ರಿಟ್ವೀಟ್ ಮಾಡಲಾಗಿದೆ.

Get Latest updates on WhatsApp. Send ‘Add Me’ to 8550851559

Loading...