ಮತ್ತೊಮ್ಮೆ ಪೊಲೀಸರ ವಶಕ್ಕೆ ರಾಹುಲ್

ದೆಹಲಿಯ ಜಂತರ್ ಮಂತರ್ ಬಳಿ ಗುರುವಾರ ರಾತ್ರಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಮತ್ತೊಮ್ಮೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿವೃತ್ತ ಯೋಧನ ಆತ್ಮಹತ್ಯೆ ಪ್ರಕರಣಕ್ಕೆ ಪ್ರತಿಭಟಿಸಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಜಂತರ್ ಮಂತರ್ ಬಳಿ ರ‌್ಯಾಲಿ ನಡೆಸಲು ಯತ್ನಿಸಿದರು. ಆದರೆ ಈ ರ‌್ಯಾಲಿಗೆ ಅನುಮತಿಯಿಲ್ಲವೆಂದು ಪೊಲೀಸರು ಅಡ್ಡಿಪಡಿಸಿದರು. ಇದನ್ನು ಪ್ರತಿಭಟಿಸಿದ ರಾಹುಲ್ ಗಾಂಧಿಯನ್ನು ಪೊಲೀಸರು ವಶಕ್ಕೆ ಪಡೆದರು.

ಆರ್ಮಿ ಮಾಜಿ ಯೋಧ ರಾಮ್ ಕಿಷನ್ ಗ್ರೇವಾಲ್ ಆತ್ಮಹತ್ಯೆ ವಿಷಯ ತಿಳಿದ ನಂತರ ಯೋಧನ ನಿವಾಸಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಬುಧವಾರವೂ ರಾಹುಲ್ ಗಾಂಧಿಯನ್ನು ಪೊಲೀಸರು ಬಂಧಿಸಿದ್ದರು.