11 ರಂದು ರಾಹುಲ್ ಗೆ ಅಧ್ಯಕ್ಷ ಪಟ್ಟದ ಪ್ರಕಟಣೆ

ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿಯವರನ್ನು ಘೋಷಿಸಲು ವೇದಿಕೆ ಸಿದ್ಧವಾಗಿದೆ. ಎಐಸಿಸಿ ಅಧ್ಯಕ್ಷ ಹುದ್ದೆಗೆ ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಡಿಸೆಂಬರ್ 10 ಕ್ಕೆ ಮುಗಿಯಲಿದೆ. ಅಧ್ಯಕ್ಷ ಹುದ್ದೆಗೆ ನಿರೀಕ್ಷಿಸಿದಂತೆಯೇ ರಾಹುಲ್ ಗಾಂಧಿಯೊಬ್ಬರೇ ನಾಮಪತ್ರ ದಾಖಲಿಸಿದ್ದರಿಂದಾಗಿ ಅವರನ್ನು ಒಮ್ಮತದಿಂದ ಆಯ್ಕೆ ಮಾಡಿರುವುದಾಗಿ 11 ರಂದು ಪ್ರಕಟಿಸಲಿದ್ದಾರೆ.

ಗುಜರಾತ್ ಚುನಾವಣೆ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಯ್ಲೂಜಿ) ಸಭೆ ಹೊಸ ಅಧ್ಯಕ್ಷರ ನೇತೃತ್ವದಲ್ಲಿ ನಡೆಯುತ್ತದೆ. ಈ ಸಭೆಯಲ್ಲಿ ಪ್ಲೀನರಿ ದಿನಾಂಕವನ್ನು ನಿರ್ಧರಿಸುತ್ತಾರೆ.

ಗೂಗಲ್ ತೇಜ್ ಮೂಲಕ ಹಣ ಗಳಿಸಿ

ಹಿರಿಯ ನಾಯಕರಿಗೆ ಸೂಕ್ತ ಸ್ಥಾನಮಾನಗಳನ್ನು ಕಲ್ಪಿಸಿ, ಯುವ ನಾಯಕರಿಗೆ ಪ್ರೋತ್ಸಾಹ ನೀಡಿ ಪಕ್ಷವನ್ನು ರಾಹುಲ್ ಗಾಂಧಿ ಒಗ್ಗಟ್ಟಾಗಿ ಮುನ್ನಡೆಸಲಿದ್ದಾರೆ ಎಂದು ಪಕ್ಷದ ನಾಯಕರು ಭಾವಿಸುತ್ತಿದ್ದಾರೆ. ಅಧ್ಯಕ್ಷ ಹುದ್ದೆಯಿಂದ ದೂರ ಸರಿಯುತ್ತಿರುವ ಸೋನಿಯಾ ಗಾಂಧಿ, ಇನ್ನು ಮುಂದೆ ಯುಪಿಎ ನೇತೃತ್ವವನ್ನು ವಹಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಮಿತ್ರಪಕ್ಷಗಳೊಂದಿಗೆ ಸದಾ ಸಂಪರ್ಕದಲ್ಲಿದ್ದು, ಮೈತ್ರಿಕೂಟವನ್ನು ಮತ್ತಷ್ಟು ಬಲಪಡಿಸಲು ಶ್ರಮವಹಿಸುತ್ತಾರೆ ಎಂದು ಪಕ್ಷದ ಮುಖಂಡರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

Get Latest updates on WhatsApp. Send ‘Subscribe’ to 8550851559