“ಮೇಕ್ ಇನ್ ಇಂಡಿಯಾ” ನನಗೂ ಇಷ್ಟ, ಆದರೆ ಮೋದಿ ವಿಫಲರಾಗಿದ್ದಾರೆ: ಅಮೆರಿಕದಲ್ಲಿ ರಾಹುಲ್ – News Mirchi

“ಮೇಕ್ ಇನ್ ಇಂಡಿಯಾ” ನನಗೂ ಇಷ್ಟ, ಆದರೆ ಮೋದಿ ವಿಫಲರಾಗಿದ್ದಾರೆ: ಅಮೆರಿಕದಲ್ಲಿ ರಾಹುಲ್

ಮೇಕ್ ಇನ್ ಇಂಡಿಯಾ ಕಾನ್ಸೆಪ್ಟ್ ನನಗೂ ಇಷ್ಟ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ ಈ ಕಾರ್ಯಕ್ರಮದ ಮೂಲಕ ಯಾರನ್ನು ಗಮನದಲ್ಲಿಟ್ಟುಕೊಳ್ಳಬೇಕಿತ್ತೋ ಅವರನ್ನೇ ಮರೆಯುತ್ತಿದ್ದಾರೆ ಎಂದು ಅಮೆರಿಕದಲ್ಲಿ ಮೋದಿ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.

ಸದ್ಯ ಅಮೆರಿಕಾ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ಪ್ರಿನ್ಸ್’ಟನ್ ಯೂನಿವರ್ಸಿಟಿಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಮೇಕ್ ಇನ್ ಇಂಡಿಯಾ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷ ಆರಂಭಿಸಿದ್ದರೆ ಚೆನ್ನಾಗಿರುತ್ತಿತ್ತು. ನಾವು ಆ ಪಾಲಿಸಿಯನ್ನು ಜಾರಿಗೆ ತಂದಿದ್ದೇ ಆದರೆ ಅದು ಖಂಡಿತವಾಗಿ ವಿಭಿನ್ನವಾಗಿರುತ್ತಿತ್ತು.

ದೊಡ್ಡ ದೊಡ್ಡ ಉದ್ಯಮಗಳಿಗೇ ಪ್ರಧಾನಿ ಮೋದಿ ಹೆಚ್ಚು ಗಮನ ಕೊಡುತ್ತಾರೆ. ಸಣ್ಣ ಮತ್ತು ಮಧ್ಯಮ ವರ್ಗದ ಕಂಪನಿಗಳನ್ನು ಗುರಿಯಾಗಿಸಿಕೊಳ್ಳಬೇಕೆಂದು ನಾನು ಭಾವಿಸುತ್ತೇನೆ. ಹೆಚ್ಚು ಉದ್ಯೋಗಗಳು, ಜೀವನಾಧಾರ ಲಭಿಸುವುದು ಈ ಎರಡು ವರ್ಗದ ಕಂಪನಿಗಳಿಂದಲೇ ಎಂದು ರಾಹುಲ್ ಹೇಳಿದರು.

ಉದ್ಯೋಗ ಸೃಷ್ಟಿ ಮಾಡುವಲ್ಲಿ ವಿಫಲವಾಗಿರುವುದರಿಂದ ಕೇಂದ್ರ ಸರ್ಕಾರ ಮತ್ತು ನರೇಂದ್ರ ಮೋದಿ ವಿರುದ್ಧ ಜನರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಅದನ್ನು ನಾವು ಗ್ರಹಿಸಬಹುದು. ಈಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೇಗೆ ಈ ಸವಾಲು ಎದುರಿಸಬಹುದು ಎಂಬುದು ನನ್ನ ಮುಂದಿರುವ ಪ್ರಶ್ನೆ ಎಂದು ಹೇಳಿದರು.

ಉದ್ಯೋಗ ಸೃಷ್ಟಿ ಮಾಡುತ್ತಾರೆಂಬ ನಂಬಿಕೆಯೇ ಭಾರತದಲ್ಲಿ ನರೇಂದ್ರ ಮೋದಿ ಮತ್ತು ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಡೊನಾಲ್ಡ್ ಟ್ರಂಪ್ ಬಗ್ಗೆ ನನಗೆ ಗೊತ್ತಿಲ್ಲ ಹಾಗಾಗಿ ಅವರ ಬಗ್ಗೆ ಮಾತಾಡೋಲ್ಲ. ಆದರೆ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಯೋಗ ಸೃಷ್ಟಿಯಲ್ಲಿ ಸಾಕಷ್ಟು ಕೆಲಸ ಮಾಡಿಲ್ಲ ಎಂದು ಹೇಳಿದರು.

Get Latest updates on WhatsApp. Send ‘Add Me’ to 8550851559

Loading...