ರಾಹುಲ್ ಕಾರಿನ ಮೇಲೆ ಕಲ್ಲಿನಿಂದ ದಾಳಿ, ಕಪ್ಪು ಬಾವುಟ ಪ್ರದರ್ಶನ – News Mirchi

ರಾಹುಲ್ ಕಾರಿನ ಮೇಲೆ ಕಲ್ಲಿನಿಂದ ದಾಳಿ, ಕಪ್ಪು ಬಾವುಟ ಪ್ರದರ್ಶನ

ಅಹಮದಾಬಾದ್: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಗುಜರಾತ್ ನಲ್ಲಿ ಕಹಿ ಅನುಭವವಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡಿ ಜನರಿಗೆ ಬೆಂಬಲವಾಗಿ ನಿಲ್ಲಬೇಕೆಂದು ರಾಹುಲ್ ಯತ್ನಿಸಿದರೆ, ಕಪ್ಪು ಬಾವುಟ ಪ್ರದರ್ಶಿಸಿ ಜನ ಸ್ವಾಗತಿಸಿದರು. ಪ್ರಧಾನಿ ನರೇಂದ್ರ ಮೋದಿಯವರಿಗೆ ಜೈ ಎನ್ನುತ್ತಾ ಜೋರಾಗಿ ಘೋಷಣೆಗಳನ್ನು ಕೂಗಿ ರಾಹುಲ್ ಗೆ ಶಾಕ್ ನೀಡಿದರು.

ಕೇವಲ ಕಪ್ಪು ಬಾವುಟ ಮತ್ತು ಮೋದಿ ಪರ ಘೋಷಣೆಗಳಲ್ಲದೆ, ಕೆಲವರು ರಾಹುಲ್ ಬೆಂಗಾವಲು ವಾಹನಗಳ ಮೇಲೆ ಕಲ್ಲೆಸೆತಕ್ಕೆ ಮುಂದಾದರು. ಹೀಗಾಗಿ ಸ್ವಲ್ಪ ಕಾಲ ಅಲ್ಲಿ ಉದ್ವಿಘ್ನ ವಾತಾವರಣ ನೆಲೆಸಿತ್ತು. ಈ ಘಟನೆ ಬನಾಸ್ ಕಾಂತ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ. ಕಾಂಗ್ರೆಸ್ ಪಕ್ಷದ ನಾಯಕರು ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಬಿಜೆಪಿ ಕಾರ್ಯಕರ್ತರೇ ಈ ಕೃತ್ಯ ನಡೆಸಿದ್ದಾರೆಂದು ಆರೋಪಿಸಿದ್ದಾರೆ.

ರೈಲಿಗೆ ಸಿಕ್ಕಿ ಹಾಕಿ ಆಟಗಾರ್ತಿ ಆತ್ಮಹತ್ಯೆ

ಇತ್ತೀಚೆಗೆ ಉತ್ತರ ಗುಜರಾತ್ ನಲ್ಲಿ ಪ್ರವಾಹ ಸಂಭವಿಸಿತ್ತು. ಪ್ರವಾಹದಿಂದ ಸುಮಾರು 200 ಜನರು ಸಾವನ್ನಪ್ಪಿದ್ದು, 4.5 ಲಕ್ಷ ಜನ ಸಂತ್ರಸ್ತರಾಗಿದ್ದಾರೆ. ನಷ್ಟಕ್ಕೊಳಗಾದ ಜನರನ್ನು ಭೇಟಿ ಮಾಡಲು ಜನಾಸ್ ಕಾಂತ ಜಿಲ್ಲೆಯಲ್ಲಿ ಧರೇನಾ ನಗರದಲ್ಲಿ ರಾಹುಲ್ ಗಾಂಧಿ ಇಂದು ಗುಜರಾತ್ ನಲ್ಲಿ ಪ್ರವಾಸ ಕೈಗೊಂಡಿದ್ದರು. ಈ ವೇಳೆ ರಾಹುಲ್ ಗಾಂಧಿಗೆ ಈ ಕಹಿ ಅನುಭವಾಗಿದೆ. ಅವರು ಬರುತ್ತಿದ್ದಂತೆ ದಾರಿಯುದ್ದಕ್ಕೂ ಕಪ್ಪು ಬಾವುಟ ಪ್ರದರ್ಶಿಸಿ ಸ್ವಾಗತಿಸಿದರು. ಗಮನಿಸಬೇಕಾದ ಅಂಶವೆಂದರೆ ರಾಹುಲ್ ಪ್ರವಾಸ ಕೈಗೊಂಡಿದ್ದ ಪ್ರದೇಶದ ಶಾಸಕ ಬೆಂಗಳೂರಿನ ಹೊರವಲಯದ ರೆಸಾರ್ಟ್ ನಲ್ಲಿದ್ದಾರೆ.

ರಾಜಕೀಯವಾಗಿ ನನ್ನ ಮಗನನ್ನು ಮುಗಿಸಲು ಪಕ್ಷದಲ್ಲೇ ಸಂಚು: ಡಿಕೆಶಿ ತಾಯಿ

ಕೆಲ ಅಪರಿಚಿತ ವ್ಯಕ್ತಿಗಳು ರಾಹುಲ್ ಕಾನ್ವಾಯ್ ಹಿಂಬಾಲಿಸಿ ಕಲ್ಲೆಸೆದು ವಾಹನವನ್ನು ಭಾಗಶಃ ಧ್ವಂಸಗೊಳಿಸಿದರು. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಕಲ್ಲಿನ ದಾಳಿಯಲ್ಲಿ ರಾಹುಲ್ ವಾಹನದ ಮುಂದಿನ ಕನ್ನಡಿಗಳು ಸಂಪೂರ್ಣ ನಾಶವಾಗಿದ್ದು, ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಎಸ್ಪಿ ಹೇಳಿದ್ದಾರೆ.

Loading...