ಮತ್ತೆ ರಾಹುಲ್ ಎಡವಟ್ಟು, ಮಾನ ಕಳೆಯುತ್ತಿರುವ ಟ್ವೀಟಿಗರು – News Mirchi

ಮತ್ತೆ ರಾಹುಲ್ ಎಡವಟ್ಟು, ಮಾನ ಕಳೆಯುತ್ತಿರುವ ಟ್ವೀಟಿಗರು

ನೋಟು ರದ್ದು ಕ್ರಮ ತೀರ್ಮಾನಕ್ಕೆ ಒಂದು ವರ್ಷವಾದ ಹಿನ್ನೆಲೆಯಲ್ಲಿ ನೋಟು ರದ್ದು ಕಷ್ಟಗಳನ್ನು ಪ್ರತಿಬಿಂಬಿಸುವ ಫೋಟೋ ಎಂದು ಮಾಜಿ ಯೋಧರೊಬ್ಬರ ಫೋಟೋವನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದರು. ಪ್ರಜೆಗಳ ಕಣ್ಣೀರು ಸರ್ಕಾರಕ್ಕೆ ಒಳ್ಳೆಯದಲ್ಲ, ಅವು ಸಮುದ್ರಗಳಂತೆ ಉಕ್ಕಿ ಹರಿದರೆ ನೀವು ಕೊಚ್ಚಿಕೊಂಡು ಹೋಗುತ್ತೀರಿ ಎಂಬ ಅರ್ಥ ಬರುವಂತೆ ಹಿಂದಿಯಲ್ಲಿ ರಾಹುಲ್ ಟ್ವೀಟ್ ಮಾಡಿದ್ದರು. ಆದರೆ ವಾಸ್ತವವಾಗಿ ಆ ಫೋಟೋದಲ್ಲಿರುವ ವ್ಯಕ್ತಿ ನೋಟು ರದ್ದು ತೀರ್ಮಾನವನ್ನು ಹೊಗಳಿ ಹೇಳಿಕೆ ನೀಡಿದ್ದರಿಂದ ರಾಹುಲ್ ಗಾಂಧಿಗೆ ಮುಜುಗರವಾಗಿದೆ.

ರಾಹುಲ್ ಗಾಂಧಿ ಟ್ವೀಟ್ ನಂತರ ಗುರ್ಗಾಂವ್ ನಲ್ಲಿನ ನಂದಲಾಲ್ ಮನೆಗೆ ಭೇಟಿ ನೀಡಿದ ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್ಐ, ಆ ವ್ಯಕ್ತಿಯನ್ನು ಮಾತನಾಡಿಸಿತು. ಸುದ್ದಿ ಸಂಸ್ಥೆಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಂದಲಾಲ್, ನೋಟು ರದ್ದು ಕ್ರಮ ದೇಶಕ್ಕೆ ಒಳಿತು ಮಾಡುವ ಉತ್ತಮ ಕ್ರಮ, ಈ ಉಗ್ರವಾದಿಗಳು(ನೋಟು ರದ್ದು ವಿರೋಧಿಸುವವರು) ಅನಗತ್ಯವಾಗಿ ರಾದ್ಧಾಂತ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಅದಕ್ಕೂ ಮುನ್ನ ಮತ್ತೊಂದು ರಾಷ್ಟ್ರೀಯ ಸುದ್ದಿ ವಾಹಿನಿಯೊಂದಿಗೆ ಮಾತನಾಡದಿ ನಂದಲಾಲ್, ಸರ್ಕಾರ ಏನು ಮಾಡಿದರೂ ಅದು ದೇಶದ ಜನತೆಗೆ ಒಳಿತು ಮಾಡುವ ಉದ್ದೇಶದಿಂದಲೇ ಎಂದು ಹೇಳಿದ್ದಾರೆ.

ಈತನ ಹೇಳಿಕೆಯನ್ನು ನೋಡಿದರೆ ಮೋದಿ ಆಡಳಿತ ಕುರಿತು ನಂದ ಲಾಲ್ ಸಂಪೂರ್ಣ ತೃಪ್ತಿಯಿಂದಿದ್ದಾರೆ ಎಂಬ ವಿಷಯ ಅರ್ಥವಾಗುತ್ತದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಮಾಧ್ಯಮಗಳಿಗೆ ಹೇಳಿದ್ದಾರೆ. ಸದ್ಯ ನಂದ ಲಾಲ್ ವೀಡಿಯೋ ವೈಲ್ ಆಗಿದ್ದು, ಖಚಿತಪಡಿಸಿಕೊಳ್ಳದೆ ರಾಹುಲ್ ಮಾಡಿದ ಟ್ವೀಟ್ ನಲ್ಲಿ ರಾಹುಲ್ ಕಾಲೆಳೆಯುವ ಕಾರ್ಯ ಮುಂದುವರೆದಿದೆ.

Get Latest updates on WhatsApp. Send ‘Add Me’ to 8550851559

Loading...