ತಂಗಿ ಮತ್ತು ಬಾವನೊಂದಿಗೆ ರಾಹುಲ್ ಗಾಂಧಿಯ ಚೀನಾ ರಾಯಭಾರಿ ಭೇಟಿ

View Later

ನವದೆಹಲಿ: ತಂಗಿ ಪ್ರಿಯಾಂಕಾ ಗಾಂಧಿ, ಬಾವ ರಾಬರ್ಟ್ ವಾದ್ರಾ ಮತ್ತು ಭಾರತದಲ್ಲಿನ ಚೀನಾ ರಾಯಭಾರಿ ಲ್ಯೂ ಝೂಹೀ ಯವರೊಂದಿಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿರುವ ಫೋಟೋ ಬುಧವಾರ ಬಹಿರಂಗವಾಗಿದೆ.

ಒಂದು ಕಡೆ ಭಾರತ-ಚೀನಾ ನಡುವೆ ಗಡಿಯಲ್ಲಿ ಉದ್ವಿಘ್ನ ಪರಿಸ್ಥಿತಿ ನೆಲೆಸಿದ್ದರೆ, ಮತ್ತೊಂದು ಕಡೆ ಭಾರತ ಚೀನಾ ನಡುವಿನ ಸಮಸ್ಯೆ ಕುರಿತು ತನಗೆ ಏನೂ ಸಂಬಂಧವಿಲ್ಲ ಎಂಬಂತೆ ಇತ್ತೀಚೆಗೆ ರಾಹುಲ್ ಗಾಂಧಿ, ದೆಹಲಿಯಲ್ಲಿರುವ ಚೀನಾ ರಾಯಭಾರಿಯನ್ನು ಭೇಟಿ ಮಾಡಿದ್ದು ವಿವಾದವಾಗಿತ್ತು. ಇದೀಗ ಕುಟುಂಬ ಸದಸ್ಯರೊಂದಿಗೆ ಚೀನಾ ಭೇಟಿಯಾಗಿರುವ ಫೋಟೋ ಬೆಳಕಿಗೆ ಬಂದಿದೆ. ಇತ್ತೀಚೆಗೆ ಕುಟುಂಬ ಸದಸ್ಯರೊಂದಿಗೆ ಭೇಟಿ ಮಾಡಿದ್ದರಾ ಅಥವಾ ಬೇರೆ ಸನ್ನಿವೇಶದಲ್ಲಿ ಭೇಟಿ ಮಾಡಿದ್ದರೇ ಎಂಬುದು ತಿಳಿದುಬಂದಿಲ್ಲ.

ಕೇಂದ್ರ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ

ರಾಹುಲ್ ಭೇಟಿಯಾದ ಕುರಿತು ತನ್ನ ವೆಬ್ಸೈಟಿನಲ್ಲಿ ಪ್ರಕಟಿಸಿದ್ದ ಚೀನಾ ರಾಯಭಾರಿ ಕಛೇರಿ, ರಾಹುಲ್ ಭೇಟಿ ವಿವಾದವಾಗುತ್ತಿದ್ದಂತೆ ವೆಬ್ಸೈಟ್ ನಲ್ಲಿ ಭೇಟಿ ಕುರಿತ ಮಾಹಿತಿಯನನ್ನು ಅಳಿಸಿಹಾಕಿತ್ತು.