ಮಂದಿರ ಕೆಡವಿದ ಬಾಬರ್, ಲೂಟಿಗೈದ ಖಿಲ್ಜಿ ಪರ ರಾಹುಲ್ ಗಾಂಧಿ

ರಾಹುಲ್ ಗಾಂಧಿ ಒಬ್ಬ ಬಾಬರ್ ಭಕ್ತ ಮತ್ತು ಖಿಲ್ಜಿ ಸಂತತಿಯವನು ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಜಿವಿಎಲ್ ನರಸಿಂಹರಾವ್ ವ್ಯಂಗ್ಯವಾಡಿದ್ದಾರೆ. ಬಾಬರ್ ರಾಮಮಂದಿರವನ್ನು ಧ್ವಂಸಗೊಳಿಸಿದ, ಖಿಲ್ಜಿ ಸೋಮನಾಥ ದೇವಾಲಯವನ್ನು ಲೂಟಿ ಮಾಡಿದ. ನೆಹರೂ ಮನೆತನ ಈ ಎರಡೂ ಇಸ್ಲಾಮಿಕ್ ಆಕ್ರಮಣಕಾರರ ಪರ ನಿಂತಿದೆ ಎಂದು ಆರೋಪಿಸಿದರು.

 

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ವಿರೋಧಿಸಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬಾಬ್ರಿ ಮಸೀದಿ ಆಕ್ಷನ್ ಕಮಿಟಿ ಸಂಚಾಲಕ ಜಫರ್ಯಾಬ್ ಜಿಲಾನಿ ಮತ್ತು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಓವೈಸಿ ಅವರೊಂದಿಗೆ ಸೇರಿ ಒಳಸಂಚು ನಡೆಸಿದ್ದಾರೆ ಎಂದು ಬಿಜೆಪಿ ಮುಖಂಡ ಜಿ.ವಿ.ಎಲ್ ನರಸಿಂಹರಾವ್ ಆರೋಪಿಸಿದ್ದಾರೆ.

ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹರಾವ್

ಅಯೋಧ್ಯೆ ಪ್ರಕರಣ ವಿಚಾರಣೆ ಮುಂದೂಡಿದ ಸುಪ್ರೀಂ

ಅಯೋಧ್ಯೆ ವಿವಾದದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಸುನ್ನಿ ವಕ್ಫ್ ಬೋರ್ಡ್ ಪರ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ವಾದಿಸಿದ್ದು, ವಿಚಾರಣೆಯನ್ನು 2019 ರ ಲೋಕಸಭೆ ಚುನಾವಣೆ ಮುಗಿಯವವರೆಗೂ ಮುಂದೂಡುವಂತೆ ಮನವಿ ಮಾಡಿದ್ದರು. ಆದರೆ ಕಪಿಲ್ ಸಿಬಲ್ ಮನವಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ಫೆಬ್ರವರಿ 8, 2018 ಕ್ಕೆ ಮುಂದೂಡಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಹೀಗೆ ಪ್ರತಿಕ್ರಿಯಿಸಿದ್ದಾರೆ.

Get Latest updates on WhatsApp. Send ‘Subscribe’ to 8550851559