ಚೀನಾ ವಿಷಯದಲ್ಲಿ ಮೋದಿಯೇಕೆ ಮೌನ ವಹಿಸಿದ್ದಾರೆ? ರಾಹುಲ್ ಪ್ರಶ್ನೆ

ನವದೆಹಲಿ: ಚೀನಾ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಏಕೆ ಮೌನ ವಹಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಸಿಕ್ಕಿಂ ನಲ್ಲಿ ನೆಲೆಸಿರುವ ಪ್ರಕ್ಷುಬ್ಧ ವಾತಾವರಣದ ಹಿನ್ನೆಲೆಯಲ್ಲಿ ಕಾಲು ಕೆರೆದು ಬರುತ್ತಿರುವ ವಿಷಯ ತಿಳಿದದ್ದೇ. ಇತ್ತೀಚೆಗೆ ಚೀನಾ ಸೇನೆ ಟಿಬೆಟ್ ನಲ್ಲಿ ಎತ್ತರವಾದ ಪ್ರದೇಶಗಳಲ್ಲಿ ಯುದ್ಧದಲ್ಲಿ ಎದುರಾಗುವ ಪರಿಸ್ಥಿತಿಗಳನ್ನು ಕೃತಕವಾಗಿ ಸೃಷ್ಟಿಸಿಕೊಂಡು ಕಸರತ್ತು ನಡೆಸಿದೆ.

ಇಂತಹ ಉದ್ವಿಘ್ನ ಪರಿಸ್ಥಿತಿಗಳು ನೆಲೆಸಿರುವಾಗ ಪ್ರಧಾನಿ ಏಕೆ ಮೌನವಹಿಸಿದ್ದಾರೆ ಎಂದು ರಾಹುಲ್ ಪ್ರಶ್ನಿಸಿದ್ದಾರೆ. ಕೂಡಲೇ ಉದ್ವಿಘ್ನ ಪರಿಸ್ಥಿತಿಯನ್ನು ತಿಳಿಗೊಳಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷ ಮೋದಿಯವರನ್ನು ಒತ್ತಾಯಿಸಿದೆ.